Index   ವಚನ - 16    Search  
 
ಮುಪ್ಪು ಇದು ತಪ್ಪಿಗೆ ಬಂದುದು. ದಪ್ಪ ಪ್ರಾಯ ಚೆಲುವಿನಿಂದಾದುದು. ಸರ್ಪಗೆ ವಿಷವೆಲ್ಲಿಪ್ಪುದು, ಉಪ್ಪಲ್ಲಿನ ನಾಳದ ದಾಡೆಯಲ್ಲಿ; ಉಲಿದರೆ ಚಪ್ಪುದು, ಕಪ್ಪೆಯ ಕೊಂದಡೆ ಕೊಲೆಯದು ತಪ್ಪದು, ತನ್ನಿಂದ ತನಗೆ ಪರಮಪ್ರಭುವೆ.