ಕಂಗೆಡುವರೆ ಕಾಲಕಂಸಿ ತಾಳಕ್ಕೆ?
ಲಿಂಗಾಂಗಿ ಸ್ಥಿರಕರವಲ್ಲದ ಹಂಗಿಗೆ ಹರಿವರೆ?
ಅಂಗವು ಬೆಳ್ಳಿಗಳಪ್ಪುವೆ?
ಮುಂಗೋಪಿಗೆ ಮುಕ್ತಿಯಿಲ್ಲ. ಮುರ್ಖತನ ಸಲ್ಲದು.
ಗುಂಗಾಡಿನ ಮನೆಯ ಹೊಕ್ಕಂದದಿ,
ಡಂಗುರವಾಕ್ಯಗಳು ಎಲ್ಲ ಭಂಗಾಭಂಗಗಳು.
ಸಂಗನ ಶರಣರು ಒಪ್ಪರು
ಗುಂಗಿಯ ಹುಳು ಭೃಂಗನಹುದೆ
ಪರಮಪ್ರಭುವೆ.
Art
Manuscript
Music
Courtesy:
Transliteration
Kaṅgeḍuvare kālakansi tāḷakke?
Liṅgāṅgi sthirakaravallada haṅgige harivare?
Aṅgavu beḷḷigaḷappuve?
Muṅgōpige muktiyilla. Murkhatana salladu.
Guṅgāḍina maneya hokkandadi,
ḍaṅguravākyagaḷu ella bhaṅgābhaṅgagaḷu.
Saṅgana śaraṇaru opparu
guṅgiya huḷu bhr̥ṅganahude
paramaprabhuve.