Index   ವಚನ - 47    Search  
 
ಸತ್ಯಕೆ ನಿಲ್ಲೆ ಠಾವಿಲ್ಲವು. ಕೊತ್ತಳವು ಕೊಮ್ಮೆ ನುಂಗಿ ಅಗಳ ನುಂಗಿತು. ಪಿತ್ತವಾದಿಗಳಿಗೆ ಹತ್ತದು ಉಪದೇಶ ಬೋಧೆ. ಹೊತ್ತುಹೋಕರಿಗೆ ಗೊತ್ತಿಗೆ ಸೆರಗ ಇಡಬಂದದೆ. ಎತ್ತಣ ದೈವತ್ವ ಗುರುವೆ, ಭಕ್ತಿ ವನವಾಸವು. ಹತ್ತಿರದಲ್ಲಿ ಶಿಕ್ಷೆಗಳಿಲ್ಲದೆ ತತ್ವಗೇಡು ಸಕಲವೆಲ್ಲ ಪರಮಪ್ರಭುವೆ.