ಕಾಪಾಲಿಕವೆ ನರಕಪಾಲ ಭಿಕ್ಷಾಟನಾದಿಗಳಂ ವಿವರಿಸೂದು.
ಮಹಾವ್ರತವೆ ಅಸ್ಥಿಧಾರಣಾದಿಗಳಂ ವಿವರಿಸುತ್ತಿರ್ಕುಂ.
ಬಳಿಕ ಪರಶಿವಪ್ರಣೀತಮಾದ ಶಾಸ್ತ್ರ ಮಂತ್ರವೆ
ಮೋಕ್ಷಾಂಗಮಾದ ಕ್ರಿಯೆ ಚರ್ಯೆ
ಯೋಗ ಜ್ಞಾನಾದಿಗಳಂ ಪ್ರಮಾಣಿಸುತ್ತಿರ್ಕುಂ,
ಮತ್ತಮಾ ಸಮಸ್ತ ಮತಾಂರತಂಗಳಲ್ಲಿ
ಪೇಳುವಾತ್ಮಸ್ವರೂಪವೆಂತೆನೆ: ದೇಹವೆ
ಆತ್ಮನೆಂಬರು ಚಾರ್ವಾಕರು,
ಇಂದ್ರಿಯಂಗಳೆ ಆತ್ಮನೆಂಬರು ಚಾರ್ವಾಕೈಕ ದೇಶಿಗಳು,
ಪ್ರಾಣವೆ ಆತ್ಮನೆಂಬರು ಹಿರಣ್ಯಗರ್ಭರೆಂಬ
ಚಾರ್ವಾಕೈಕ ದೇಶಿಗಳು. ಬಳಿಕ ದೇಹಾದಿ
ವಿಲಕ್ಷಣನಾದೋರ್ವಾತ್ಮನು
ದೇಹಪರಿಮಿತವಾಗಿ ಮಧ್ಯಪರಿಮಾಣತ್ವದಿಂ
ಸಂಕೊಚ ವಿಕಾಸ ಧರ್ಮಯಕ್ತನೆಂಬರು ಜೈನರು,
ಬುದ್ಧಿಯೆ ಆತ್ಮನೆಂಬರು ಬೌದ್ಧರು,
ಆನಂದವೆ ಆತ್ಮನೆಂಬರು ಕೋಳ
ಯಾಮಳ ಶಾಕ್ತೇಯರುಗಳು,
ಆತ್ಮನು ನಾಡಿಮಧ್ಯಗತನಾಗಿ
ಅಣುಪರಿಮಾಣನೆಂಬರು ಪಾಂಚರಾತ್ರರು,
ಆತ್ಮನು ದೇಹ ಪುತ್ರಾದಿ ರೂಪನೆಂಬರು ಲೌಕಿಕರು,
ಆತ್ಮನು ಸ್ವತಃ ಪ್ರಮಾಣಜ್ಞಾನ ಸಮೇತನೆಂಬರು
ಮಿಮಾಂಸಕ ಭೇಧಮಾದ ಭಾಟ್ಟ ಪ್ರಭಾಕರರುಗಳು,
ಆತ್ಮನು ಗಗನದಂತೆ ಮಹತ್ಪರಿಮಾಣನಾಗಿ
ಪಾಷಾಣದಂತೆ ಜಡಸ್ವರೂಪನಾದೊಡಂ
ಮನಃಸಂಯೋಗದಿಂ ಚಿದ್ಧರ್ಮಯುಕ್ತನೆಂಬರು,
ನೈಯಾಯಿಕ ವೈಶೇಷಿಕರುಗಳು,
ಆತ್ಮನು ಅಸಚ್ಚಿನ್ಮಾತ್ರನೆಂಬರು ಸಾಂಖ್ಯ ಪಾತಂಜಲರುಗಳು,
ಆತ್ಮನು ಜ್ಞಾಪ್ತಿಮಾತ್ರನೆಂಬರು ವೇದಾಂತಿಗಳು,
ಆತ್ಮನು ನಿತ್ಯವ್ಯಾಪಕನೆಂಬರು ಪಾಶುಪತ
ಕಾಪಾಲಿಕ ಮಹಾವ್ರತರುಗಳು.
ಆತ್ಮನು ನಿತ್ಯವ್ಯಾಪಕ ಜ್ಞಾನಕ್ರಿಯಾರೂಪನೆಂಬರು
ಮಾಂತ್ರ ಸಂಜ್ಞಿತ ಸಿದ್ಧಾಂತಿಗಳೆಂದು
ಪೃಥಕ್ಕರಿಸಲ್ವೇಳ್ಕುಂ ಶಾಂತವೀರೇಶ್ವರಾ.
ಇಂತೀ ಮತಾಂತರಂಗಳ
ಭಿನ್ನಾಚರಣೆವಿಡಿವನಲ್ಲಯ್ಯ ಶರಣ ಶಿವಾದ್ವೈ[ತಿ]ಯಾಗಿ,
ಮಹಾಗುರುಶಾಂತವೀರಪ್ರಭುವೆ.
Art
Manuscript
Music
Courtesy:
Transliteration
Kāpālikave narakapāla bhikṣāṭanādigaḷaṁ vivarisūdu.
Mahāvratave asthidhāraṇādigaḷaṁ vivarisuttirkuṁ.
Baḷika paraśivapraṇītamāda śāstra mantrave
mōkṣāṅgamāda kriye carye
yōga jñānādigaḷaṁ pramāṇisuttirkuṁ,
mattamā samasta matānrataṅgaḷalli
pēḷuvātmasvarūpaventene: Dēhave
ātmanembaru cārvākaru,
indriyaṅgaḷe ātmanembaru cārvākaika dēśigaḷu,
prāṇave ātmanembaru hiraṇyagarbharemba
cārvākaika dēśigaḷu. Baḷika dēhādi
Vilakṣaṇanādōrvātmanu
dēhaparimitavāgi madhyaparimāṇatvadiṁ
saṅkoca vikāsa dharmayaktanembaru jainaru,
bud'dhiye ātmanembaru baud'dharu,
ānandave ātmanembaru kōḷa
yāmaḷa śāktēyarugaḷu,
ātmanu nāḍimadhyagatanāgi
aṇuparimāṇanembaru pān̄carātraru,
ātmanu dēha putrādi rūpanembaru laukikaru,
ātmanu svataḥ pramāṇajñāna samētanembaru
mimānsaka bhēdhamāda bhāṭṭa prabhākararugaḷu,
ātmanu gaganadante mahatparimāṇanāgi
pāṣāṇadante jaḍasvarūpanādoḍaṁ
manaḥsanyōgadiṁ cid'dharmayuktanembaru,
naiyāyika vaiśēṣikarugaḷu,
Ātmanu asaccinmātranembaru sāṅkhya pātan̄jalarugaḷu,
ātmanu jñāptimātranembaru vēdāntigaḷu,
ātmanu nityavyāpakanembaru pāśupata
kāpālika mahāvratarugaḷu.
Ātmanu nityavyāpaka jñānakriyārūpanembaru
māntra san̄jñita sid'dhāntigaḷendu
pr̥thakkarisalvēḷkuṁ śāntavīrēśvarā.
Intī matāntaraṅgaḷa
bhinnācaraṇeviḍivanallayya śaraṇa śivādvai[ti]yāgi,
mahāguruśāntavīraprabhuve.