Index   ವಚನ - 11    Search  
 
ಮತ್ತಮಾನುಗ್ರಹಿಸಲು ಯೋಗ್ಯನಾದ ಶಿಷ್ಯನ ಸವಿನಯದಲ್ಲಯೂ, ಅನುಗ್ರಾಹಕನಾದ ಗುರುವಿನ ಕಾರುಣ್ಯದಲ್ಲಿಯೂ, ಸರ್ವಾನುಗ್ರಾಹಕನಾದ ಶಿವನೆ ಕರ್ತನಾದ ಕಾರಣ, ಸರ್ವಲಕ್ಷಣಸಂಪನ್ನನಾದ ಗುರುವಿನ ಸರ್ವಲಕ್ಷಣಸಂಪನ್ನನಾದ ಶಿಷ್ಯನ ಯೋಗವು ಅತ್ಯಂತ ದುರ್ಲಭವಾದಂಥಾದು. ಇಂತೆಂದು ಪೌಷ್ಕರಂ ಪೇಳುತ್ತಿರ್ದಪುದು ಶಾಂತವೀರೇಶ್ವರಾ.