Index   ವಚನ - 27    Search  
 
‘ಶುದ್ಧತ್ವಂ ಶಿವಮುದ್ದಿಷ್ಟಂ ಶಿವಾಜ್ವಾತಾದಿಶೈವಕಂ| ಶುದ್ಧಶೈವ ಸಮಾಯೋಗಾತ್|| ಶುದ್ಧಶೈವಮಿತಿ ಸ್ಮ್ರತಂ’ ಎಂದು ಶಿವನು ಉದ್ದೇಶಿಸಲ್ಪಟ್ಟುಹುದರಿಂದ ಶುದ್ಧತ್ವವಪ್ಪುದು. ಶಿವನ ದೆಸೆಯಿಂದ ಪುಟ್ಟಿದುದಾದ ಕಾರಣ ಶೈವ ಶಬ್ದವಾಯಿತ್ತು. ಶುದ್ಧಶೈವಂಗಳೆಂಬ ಶಬ್ದಗಳು ಕೂಟದ ದೆಸೆಯಿಂದ ಶುದ್ಧಧೈವವೆಂದು ನೆನೆಯಲ್ಪಟ್ಟಿತ್ತು. ಮತ್ತಂ, ‘ಶುದ್ಧಶೈವಾನ್ಮಹಾಸೇನ ತಸ್ಮಾಜ್ಜಾತಃ’ ಎಂದು ಆ ಶುದ್ಧಶೈವನ ದೆಸೆಯಿಂದ ಪುಟ್ಟಿದವನು ಶಿವಬ್ರಾಹ್ಮಣನೆನಿಸಿಕೊಂಬನು. ‘ವೀರತಂತ್ರೇ ಶಿವದ್ವಿಜಾಸ್ತು ವಿಪ್ರೇಂದ್ರಕಾದ್ಯಾದಿ ಶೈವಾಃ ಪ್ರಕೀರ್ತಿತಾಃ’ ಎಂದು ಶಿವಬ್ರಾಹ್ಮಣರೆನಿಸಿಕೊಂಬ ಆ ಬ್ರಾಹ್ಮಣರುಗಳು ಆದಿಶೈವರೆನಿಸಿಕೊಂಬರು. ಅವರಾರಾರೆಂದೊಡೆ ಪೇಳ್ದಪಂ, ಶಾಂತವೀರೇಶ್ವರಾ