‘ಏತೇಷೂಕ್ತಿಷು ಸರ್ವೇಷೂ ತತ್ತನ್ಮಂತ್ರೇಷು ಮಿಶ್ರಕಾತ್||
ಸಮಭಕ್ತಿಸಮಾಯಜ್ಯ ಸರ್ವಾನ್ ಲಿಂಗೇನ ಭಾವಯೇತ್’
ಎಂದು ಈ ಹೇಳಿದ ಪಂಚಾವರಣ ಮೊದಲಾದ
ಸಮಸ್ತ ದೇವತೆಗಳಲ್ಲಿಯೂ
ಆಯಾಯ ದೇವತಾಮಂತ್ರಗಳಲ್ಲಿಯೂ ಬೆರಸಿರ್ಪುದರಿಂದ
ಸಮಾನವಾದ ಭಕ್ತಿಯೊಡನೆ ಕೂಡಿ ಸಮಸ್ತ ದೇವತೆಗಳನು
ಶಿವ ಪರಿಪೂರ್ಣಭಾವದಿಂ, ಶಿವಲಿಂಗದೊಡನೆ ಕೂಡಿ ಭಾವಿಸೂದು.
‘ಮಿಶ್ರಶೈವಮಿತಿ ಪ್ರೋಕ್ತಂ ಶುದ್ಧಶೈವಮತ ಶೃಣು’- ಈ ಪ್ರಕಾರದಿಂದ
ಮಿಶ್ರಶೈವವು ಹೇಳಲ್ಪಟ್ಟಿತ್ತು
ಇದರಿಂದ ಮುಂದೆ ಶುದ್ಧಶೈವವನು,
‘ಕೇಳ ಎಲೆ ಕುಮಾರ’ ಎಂದು ಶಿವನು ನಿರೂಪಿಸುತ್ತಿರ್ದನಯ್ಯಾ,
ಶಾಂತವೀರೇಶ್ವರಾ
Art
Manuscript
Music Courtesy:
Video
Transliteration‘Ētēṣūktiṣu sarvēṣū tattanmantrēṣu miśrakāt||
samabhaktisamāyajya sarvān liṅgēna bhāvayēt’
endu ī hēḷida pan̄cāvaraṇa modalāda
samasta dēvategaḷalliyū
āyāya dēvatāmantragaḷalliyū berasirpudarinda
samānavāda bhaktiyoḍane kūḍi samasta dēvategaḷanu
śiva paripūrṇabhāvadiṁ, śivaliṅgadoḍane kūḍi bhāvisūdu.
‘Miśraśaivamiti prōktaṁ śud'dhaśaivamata śr̥ṇu’- ī prakāradinda
miśraśaivavu hēḷalpaṭṭittu
idarinda munde śud'dhaśaivavanu,
‘kēḷa ele kumāra’ endu śivanu nirūpisuttirdanayyā,
śāntavīrēśvarā