‘ಶುದ್ಧಶೈವಮಿತಿ ಪ್ರೋಕ್ತಂ| ವೀರಶೈವಮತಃ ಶ್ರುಣು’:
ಈ ಪ್ರಕಾರದಿಂದ ಶುದ್ಧಶೈವವು ನಿರೂಪಿಸಲ್ಪಟ್ಟಿತ್ತು.
ಅಲ್ಲಿಂಧ ಮೇಲೆ ವೀರಶೈವವನು ಕೇಳು:
‘ವೀರತಂತ್ರೇ ಸರ್ವೇಷಾಮಪಿ ಶೈವಾನಾಂ ವೀರಶೈವಂ ಮಹೋತ್ತಮಂ||
ಸುಲಭಾದೇವ ಪೂಜಾ ಸು| ಸುಲಭಂ ಚ ಕ್ರಿಯಾವಹಂ’||
ಎಲೆ ದೇವಿಯೆ, ಸಮಸ್ತ ಶೈವಂಗಳೊಳಗೆ ವೀರಶೈವವೆ ಅತ್ಯುತ್ತಮವಾದುದು.
ಆ ವೀರಶೈವ ಮಾಡುವ ಶಿವಪೂಜೆ ಲೇಸಾಗಿ ಸುಲಭವಾದಂಥಾದು.
ಪೂಜಾದಿಗಳ ಮಾಟವು ಸುಲಭವಹಂಥಾದುದು.
[ಹೀಗೆಂದು] ಈಶ್ವರನು ದೇವಿಯರಿಗೆ ನಿರೂಪಿಸುತ್ತಿರ್ದನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Śud'dhaśaivamiti prōktaṁ| vīraśaivamataḥ śruṇu’:
Ī prakāradinda śud'dhaśaivavu nirūpisalpaṭṭittu.
Allindha mēle vīraśaivavanu kēḷu:
‘Vīratantrē sarvēṣāmapi śaivānāṁ vīraśaivaṁ mahōttamaṁ||
sulabhādēva pūjā su| sulabhaṁ ca kriyāvahaṁ’||
ele dēviye, samasta śaivaṅgaḷoḷage vīraśaivave atyuttamavādudu.
Ā vīraśaiva māḍuva śivapūje lēsāgi sulabhavādanthādu.
Pūjādigaḷa māṭavu sulabhavahanthādudu.
[Hīgendu] īśvaranu dēviyarige nirūpisuttirdanayya
śāntavīrēśvarā