Index   ವಚನ - 46    Search  
 
‘ಅಲ್ಪಕ್ರಿಯಾ ಬಹುಫಲಂ | ವೀರಶೈವಂ ಮಾಹೇಶ್ವರ || ಅನ್ಯಶೈವಂತು ತತ್ಸರ್ವಂ ಫಲಮಲ್ಪಂ ಕ್ರಿಯಾ ಬಹು’ ಎಂದು, ಎಲೆ ಮಹಾದೇವಿಯೆ ವೀರಶೈವವು, ಅಲ್ಪ ಕ್ರಿಯೆಗಳಿಂದವೇ ಬಹಳ ಫಲವುಳ್ಳಂಥಾದು, ಈ ವೀರಶೈವವಲ್ಲದೆ ಉಳಿದ ಸಮಸ್ತ ಶೈವವು ಅಲ್ಪ ಫಲವುಳ್ಳದಾಗಿಯೂ ಬಹುಕ್ರಿಯೆಗಳುಳ್ಳುದು. ‘ತಸ್ಮಾರ್ತ್ಸರ್ವಪ್ರಯತ್ನೇನ ವೀರ ಮಾಹೇಶ್ವರಂ ಶುಭಂ’. ಅದು ಕಾರಣ. ನಾನಾ ಪ್ರಯತ್ನದಿಂದಲೂ ವೀರಮಾಹೇಶ್ವರವೆ ಸುಲಭವಾದಂಥದು, ಶಾಂತವೀರೇಶ್ವರಾ