Index   ವಚನ - 45    Search  
 
‘ಮಾಹೇಶ್ವರಾಸ್ಸಮಾಕ್ಯಾತಾಃ ಕರ್ಮಯಜ್ಷರತಾ ಭುವಿ | ತಸ್ಮಾದಾಭ್ಯಂತರೇ ಕುರ್ಯ್ಯುಃ ಶೈವಾ ಮಹೇಶ್ವರಾ ಬಹಿಃ | ಶಾಸ್ತ್ರಂತು ವೀರಶೈವಾನಾಂ ಷಡ್ವಿಧಂ ಸ್ಥಳ ಭೇದತಃ’ ಲೋಕದಲ್ಲಿ ಹೊರಗೆ ಕರ್ಮಯಜ್ಞದಲ್ಲಿ ಪ್ರೀತಿಯುಳ್ಳಂಥವರೆ ಮಾಹೇಶ್ವರರೆಂದು ಚೆನ್ನಾಗಿ ಹೇಳಲ್ಪಟ್ಟಂಥವರು. ಅದು ಕಾರಣದ ದೆಸೆಯಿಂದೆ ಅಂತರಂಗದಲ್ಲಿ ಶೈವರು ಕ್ರೀಗಳೇನು ಮಾಡುತ್ತಿರ್ದಪರು, ಬಹಿರಂಗದಲ್ಲಿ ಮಾಹೇಶ್ವರರು ಮಾಡುತ್ತರ್ದ್ದಪರು. ವೀರಶೈವರುಗಳಿಗೆ ಶಾಸ್ತ್ರವಾಯಿತ್ತಾದೊಡೆ, ಸ್ಥಲವಿಶೇಷದ ದೆಸೆಯಿಂದ ಎರಡೆರಡು ಪ್ರಕಾರವಯ್ಯ ಶಾಂತವೀರೇಶ್ವರಾ