‘ಶ್ರೇಷಂ ದೀಕ್ಷಾ ಕ್ರಿಯಾಂ ಕೃತ್ವಾ ಮಲತ್ರವಿಮೋಚನಂ | ಗುರು ಶಿಷ್ಯಂ
ಸಮಾಲೋಕ್ಯ ತತ್ವದೇಹಂ ವಿಚಿಂತಯೇತ್||’ ಎಂದು
ಶಿವಾಚಾರ್ಯನು ಪೇಳಿದ ದೀಕ್ಷಾಸತ್ಕರ್ಮವೆಲ್ಲವನು ಮಾಡಿ,
ಮಲತ್ರಯಂಗಳನು ತೊಲಂಗಿಸುವನು,
ವೀರಮಾಹೇಶ್ವರ ದೀಕ್ಷಾಪಟದಲ್ಲಿ ಹೇಳಿದ ಹಾಂಗೆ ಆಡಿ,
ಶಿಷ್ಯನಂ ಕೃಪಾಲೋಕನದಿಂ
ತತ್ವ ದೇಹದ ಹಾಂಗೆ ಚಿಂತಿಸುವುದು
ಶಾಂತವೀರೇಶ್ವರಾ.