Index   ವಚನ - 58    Search  
 
‘ವೀರ ಸಾಮಾನ್ಯಮಾಖ್ಯಾತಂ | ವಿಶೇಷಂ ಚ ತತಃ ಶ್ರುಣು’ ಶಿವಕುಂಭಂತು ಸಂಸ್ಥಾಪ್ಯ | ಸ್ಥಂಡಿಲಾದಿಷು ಪೂರ್ವವತ್ | ಶಿವಕುಂಭೆ ಶಿವಂ ಪೂಜ್ಯ ಭಕ್ತನ್ ಸಂಪ್ರತೋಷಯೇತ್’ ಇಂತೆಂದು ಈ ಪ್ರಕಾರದಿಂದ ಸಾಮಾನ್ಯ ವೀರಶೈವವನು ಕೇಳು: ವೀರಶೈವ ದೀಕ್ಷಾ ಕರ್ತೃವಪ್ಪ ದೇಶಿಕೋತ್ತಮನು ಶುದ್ಧಶೈವ ದೀಕ್ಷಾವಿಧಾನಕ್ಕೆ ಹೇಂಗೆ ಹಾಂಗೆ ಮಂಟಪಮಧ್ಯಸ್ಥಮಪ್ಪ ವೇದಿಕೆಯ ಮೇಲಣ ವರ್ಣಮಂಡಲವುಳ್ಳ ಸ್ಥಂಡಿಲದ ಮೇಲೆ ಶಿವಕುಂಭವನು ಸ್ಥಾಪಿಸಿ, ಆ ಶಿವಕುಂಭದಲ್ಲಿ ಶಿವನನು ಪೂಜಿಸಿ, ವಿಭೂತಿ ವೀಳೆಯ ಮೊದಲಾದವರಿಂ ದೀಕ್ಷೋತ್ಸವಕ್ಕೆ ಬಂದ ಒಡೆಯರು ಭಕ್ತರಿಗಳನು ಸಂತೋಷಬಡಿಸೂದು ಶಾಂತವೀರೇಶ್ವರಾ.