Index   ವಚನ - 5    Search  
 
ತಾ ದೇವರಾದ ಮತ್ತೆ ಪೂಜೆಗೊಂಡವರಲ್ಲಿ ಅಡಗಡಿಗೆ ಗಡಿತಡಿಗೆ ಬರಲೇತಕ್ಕೆ? ತಾ ಪರಮನಿರ್ವಾಣದಲ್ಲಿ ತಿರುಗಿ ಆಡು[ವ]ವರ, [ಕೂ]ಡುವವರ, ಒಳ್ಳಿತ್ತ ಸಡಗರಿಸಿ ನುಡಿವ[ವ]ರ ಒಡಗೂಡಿ ಬಾಗಿಲು ಚಾವಡಿಮನೆಯಲ್ಲಿ ನಿಲ್ಲು, ಬಾ-ಹೋಗೆನಿಸಿಕೊಳಲೇತಕ್ಕೆ? ಅವರನೆಲ್ಲಿ ಕಂಡಲ್ಲಿಯೆ ನೋಡಿ, ಅವರು ಸಲ್ಲೀಲೆಯಲ್ಲಿ ಮಾಡುವುದ ಕೇಳಿ ಅಲ್ಲಿಯೆ ಪರಮಾನಂದದಲ್ಲಿ ಸುಖಿಯಹ ಮಹಾತ್ಮಂಗೆ ಅಲ್ಲಿಯಿಲ್ಲಿಯೆಂಬ ಭಾವದ ಭ್ರಮೆಯಿಲ್ಲ, ಗಾರುಡೇಶ್ವರಲಿಂಗವನರಿದ ಶರಣ.