Index   ವಚನ - 6    Search  
 
ದಾಸ-ದುಗ್ಗಳೆಯವರ ತವನಿಧಿಪ್ರಸಾದವ ಕೊಂಡೆನಯ್ಯಾ. ಸಿರಿಯಾಳ-ಚೆಂಗಳೆಯವರ ಪ್ರಾಣಪ್ರಸಾದವ ಕೊಂಡೆನಯ್ಯಾ. ಸಿಂಧು-ಬಲ್ಲಾಳವರ ಸಮತಾಪ್ರಸಾದವ ಕೊಂಡೆನಯ್ಯಾ. ಬಿಬ್ಬಬಾಚಯ್ಯಗಳ ಸಮಯಪ್ರಸಾದವ ಕೊಂಡೆನಯ್ಯಾ. ಮಹಾದೇವಿಯಕ್ಕಗಳ ಜ್ಞಾನಪ್ರಸಾದವ ಕೊಂಡೆನಯ್ಯಾ. ನೀಲಲೋಚನೆಯಮ್ಮನವರ ನಿರ್ವಯಲಪ್ರಸಾದವ ಕೊಂಡೆನಯ್ಯಾ. ಇಂತೀ ಏಳ್ನೂರೆಪ್ಪತ್ತಮರಗಣಂಗಳ ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ಬದುಕಿದೆನು ಕಾಣಾ ಗಾರುಡೇಶ್ವರಾ.