ಉರಿಲಿಂಗದೇವ ನಿನ್ನನಗಲದ ಪರಿಯನು ಹೇಳಿಹೆನು,
ಕೇಳಾ ನಿನಗೆ ಸಖಿಯೆ:
ಉರಿಲಿಂಗದೇವ ಎಂಬುದೆ ಮಂತ್ರ,
ಉರಿಲಿಂಗದೇವ ಎಂಬುದೆ ಯಂತ್ರ,
ಉರಿಲಿಂಗದೇವ ಎಂಬುದೆ ತಂತ್ರ,
ಉರಿಲಿಂಗದೇವ ಎಂಬುದೆ ವಶ್ಯ.
ಉರಿಲಿಂಗದೇವಾ, ಉರಿಲಿಂಗದೇವಾ, ಎನ್ನುತ್ತಿದ್ದೇನೆ.
Art
Manuscript
Music
Courtesy:
Transliteration
Uriliṅgadēva ninnanagalada pariyanu hēḷihenu,
kēḷā ninage sakhiye:
Uriliṅgadēva embude mantra,
uriliṅgadēva embude yantra,
uriliṅgadēva embude tantra,
uriliṅgadēva embude vaśya.
Uriliṅgadēvā, uriliṅgadēvā, ennuttiddēne.