Index   ವಚನ - 25    Search  
 
ಕಾಯಕ್ಕೆ ಕಾಹ ಕೊಡುವರಲ್ಲದೆ ಮನಕ್ಕೆ ಕಾಹ ಕೊಡುವರೆ ಕೆಳದಿ? ಇಂತಪ್ಪ ನಲ್ಲನನೆಲ್ಲಿಯೂ ಕಾಣೆ, ಇಂತಪ್ಪ ಪುರುಷನನೆಲ್ಲಿಯೂ ಕಾಣೆ, ಇಂತಪ್ಪ ಚೋದ್ಯವನೆಲ್ಲಿಯೂ ಕಾಣೆ, ಸದ್ಗುಣದ ಕಾಹನು ಮನಕ್ಕೆ ಕೊಟ್ಟನು, ಉರಿಲಿಂಗದೇವನು, ಅತಿಚೋದ್ಯವೆನಗೆ.