Index   ವಚನ - 39    Search  
 
ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರನವ್ವಾ? ನೆರೆವ ಕ್ರೀಯಲ್ಲಿ ನೆರೆದು, ಸುಖಿಸುವುದಲ್ಲದೆ ನೆನೆವುದಿನ್ನಾರನವ್ವಾ? ನೆನಹಿನ ನಲ್ಲ ಉರಿಲಿಂಗದೇವನ ಕಂಡ ಬಳಿಕ ನೆನವುದಿನ್ನಾರ ಹೇಳವ್ವಾ?