Index   ವಚನ - 42    Search  
 
ಮಾನಸದಲ್ಲಿಪ್ಪನು, ಬುದ್ಧಿಯಲ್ಲಿಗೆ ಹೋಹನು. ಚಿತ್ತದಲ್ಲಿ ನೆಲೆ ಎಮ್ಮ ನಲ್ಲಗೆ, ಕೇಳವ್ವಾ, ಕೆಳದಿ. ಅಹಂಕಾರ ಕೂಡಿ ಅಹಂಕಾರದ ನಲ್ಲನ ಪರಿಕರ ವಿಪರೀತ ಅಹಂಕಾರ. ಅಹಂಕಾರರೀ ಮತ್ತೆ ಯಾರಲ್ಲಿ ಕೂಡಿ ಸುಖಿಸುವೆ? ಇವರೆಲ್ಲರ ಮುಂದೆ ತನ್ನ ಹಿಡಿದು ನೆರೆದಡೆ ಅವರೆನ್ನನೇಗೆಯ್ವರು ಉರಿಲಿಂಗದೇವಾ.