ಶ್ರುತಿಭ್ರಾಂತು ನಿರಸನ: ಶಿವಾಗಮಪ್ರತಿಷ್ಠೆ,
ಕುಲಾಭಿಮಾನ ನಿರಸನ: ಶಿವಕುಲಪ್ರತಿಷ್ಠೆ,
ಅನ್ಯದೈವನಿರಸನ: ಏಕೋದೇವಪ್ರತಿಷ್ಠೆ,
ಸ್ಥಾವರನಿರಸನ: ಏಕಲಿಂಗನಿಷ್ಠಾಪ್ರತಿ[ಷ್ಠೆ].
ಪರಮತತಿರಸ್ಕಾರ ಸ್ವಮತಸ್ಥಾಪನದಿಂ ಮಾಹೇಶ್ವರನ ನಿಜಸ್ಥಲ.
ಅನಂತ ವೇದಶಾಸ್ತ್ರಪುರಾಣಾಗಮತರ್ಕಂಗಳ
ಆತ್ಮ ಮಾಡಿದನಲ್ಲದೆ ಆತ್ಮನನವು ಮಾಡಿದುದಿಲ್ಲ.
ಎನ್ನಂತರಂಗದ ಅರಿವಿನ ಮೂರ್ತಿಯಾಗಿ
ಎನ್ನ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು.
Art
Manuscript
Music
Courtesy:
Transliteration
Śrutibhrāntu nirasana: Śivāgamapratiṣṭhe,
kulābhimāna nirasana: Śivakulapratiṣṭhe,
an'yadaivanirasana: Ēkōdēvapratiṣṭhe,
sthāvaranirasana: Ēkaliṅganiṣṭhāprati[ṣṭhe].
Paramatatiraskāra svamatasthāpanadiṁ māhēśvarana nijasthala.
Ananta vēdaśāstrapurāṇāgamatarkaṅgaḷa
ātma māḍidanallade ātmananavu māḍidudilla.
Ennantaraṅgada arivina mūrtiyāgi
enna uriliṅgadēvaru saṅkalpisi āgendaḍādavu