Index   ವಚನ - 47    Search  
 
ಸಕಲಶ್ರುತಿಗಳ ಮುಂದಿರ್ದವರ ಸವಿಮಾತಿನ ವಶಕ್ಕೆ ಸಿಕ್ಕದೆ, ಅತೀತವಾದ ವಸ್ತುವ ಬೇಡಿಕೊಳ್ಳಿರೆ. ಸಕಲಾತ್ಮರ ಮುಂದಿರ್ದವರ ತರ್ಕಕ್ಕೆ ಉರಿಲಿಂಗವಾಗಿ ಸಿಕ್ಕದೆ ಅತೀತವಾದ ವಸ್ತುವ ಬೇಡಿಕೊಳ್ಳಿರೆ. ಇಂತು ಸಕಲಾತ್ಮರ ಹೊಂದಿಯೂ ಹೊಂದದೆ ನಿತ್ಯಸಿಂಹಾಸನದ ಮೇಲೆ ನಿತ್ಯನಾಗಿರ್ದ ನಮ್ಮ ಉರಿಲಿಂಗದೇವನ ಬೇಡಿಕೊಳ್ಳಿರೆ.