Index   ವಚನ - 28    Search  
 
ಅರಿದು ಮರೆದವನು ಶಿವಭಕ್ತನೆ? ಅಲ್ಲ. ಶಿವಭಕ್ತನರಿದ ಬಳಿಕ ಮರೆಯನು. ಅರಿದು ಮರೆದವನು ಮದ್ದಗುಣಿಕೆಯ ಮೆಲಿದವನು. ಮದಮಧುವ ಸೇವಿಸಿದವನು. ಅರಿದು ಮರೆದವನು ಅಜ್ಞಾನಿಗಳ ಸಂಗವ ಮಾಡಿದವನು. ಶ್ವಾನಮೂತ್ರವನುಂಡವನು. ಅವಿದರುಗಳಿಗೆ ಅರಿವು ಮರವೆ ಸಹಜವಾದ ಕಾರಣ ಅರಿದವನಲ್ಲ, ಅರಿತು ಮರೆದವನಲ್ಲ ಶಿವಭಕ್ತನು. ನಂಬುವನಲ್ಲ ನಂಬುಗೆಗೆಡುವನಲ್ಲ ಶಿವಭಕ್ತನು. ವಿಶ್ವಾಸವ ಮಾಡುವನಲ್ಲ ಅವಿಶ್ವಾಸವ ಮಾಡುವನಲ್ಲ ಶಿವಭಕ್ತನು. ಮರೆದಡೆ ಮರೆದವರಂತೆ ಅರಿದಡೆ ಶಿವನಂತೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.