Index   ವಚನ - 65    Search  
 
ಎನ್ನ ಅಂತರಂಗದಲ್ಲಿ ಆವರ್ತಿಸಿ ಬಹಿರಂಗದಲ್ಲಿ ವರ್ತಿಸಿ ತೋರುವೆಯಯ್ಯಾ. ಎನ್ನ ಕಂಗಳ ಮೊದಲ-ಕೊನೆಯಲ್ಲಿ ನೀ ತೋರುತ್ತಿಪ್ಪೆಯಯ್ಯಾ. 'ಲಿಂಗಂ ಪ್ರಕಾಶಮವ್ಯಕ್ತಂ ಲಿಂಗಂ ಪ್ರತ್ಯಕ್ಷಗೋಚರಂ ಲಿಂಗಂ ಪ್ರಸನ್ನರೂಪಂ ಚ ತಲ್ಲಿಂಗಂ ಜ್ಯೋತಿರಾತ್ಮಕಂ' ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಜ್ಯೋತಿ ನೀನೇ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.