`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ'
ಎಂಬ ಶ್ರುತಿಮತವಿಡಿದು ಏಕಲಿಂಗನಿಷ್ಠಾಪರನಾದನು ಮಾಹೇಶ್ವರನು.
`ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಾಜ್ಯಂ'
ಎಂಬ ಶ್ರುತಿ ಮತವಿಡಿದು ಅನ್ಯದೈವಂಗಳಂ ಬಿಟ್ಟು
ನಿಮ್ಮನೇ ಧ್ಯಾನಿಸುವನಯ್ಯಾ, ನಿರಂತರ ನಿಮ್ಮ ಮಾಹೇಶ್ವರನು.
`ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್'
ಎಂಬ ಶ್ರುತಿಮತವಿಡಿದು ನಿಮ್ಮನೆ ಉಪಾಸ್ತಿಯ ಮಾಡಿ
ಲಿಂಗಾರ್ಚನೆಯ ಮಾಡುವರಯ್ಯಾ ನಿಮ್ಮ ಮಾಹೇಶ್ವರರು.
ಅದು ಕಾರಣ ನಿಮ್ಮ ಐಕ್ಯವ ನಿಮ್ಮ ಮಾಹೇಶ್ವರನೆ ಬಲ್ಲ.
ನಿಮ್ಮ ಮಾಹೇಶ್ವರಾಧಿಕ್ಯವ ನೀವೇ ಬಲ್ಲಿರಿ.
ಉಳಿದ ದೇವ ದಾನವ ಮಾನವಾದಿಗಳು ಅರಿಯಬಹುದೆ?
ನಿಮ್ಮ ಘನವನು, ನಿಮ್ಮ ಮಾಹೇಶ್ವರರ ಘನವನು
ಶಿವನೆ ಬಲ್ಲ, ಶಿವನ ಮೀರುವ ಪದವುಂಟೆ?
ಸಕಲಬ್ರಹ್ಮಾಂಡವನೂ ಅವಗ್ರಹಿಸಿಕೊಂಡಿಪ್ಪನಾಗಿ ಶಿವನು,
ಆ ಶಿವನನವಗ್ರಹಿಸಿಕೊಂಡಿಪ್ಪರು ಮಾಹೇಶ್ವರರು
ಅಣುಮಹತ್ತಿನೊಳಗೆ ಸಂಪೂರ್ಣರಪ್ಪರು.
'ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ,
`ಯಥಾ ಶಿವಸ್ತಥಾ ಭಕ್ತಃ' ಎಂದುದಾಗಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣರ
ಮೀರಿದ ಪದ ಉಂಟಾದರೆ ಬಲ್ಲರೆ ಹೇಳಿ.
Art
Manuscript
Music Courtesy:
Video
Transliteration`Ēka ēva rudrō na dvitīyāya tasthē'
emba śrutimataviḍidu ēkaliṅganiṣṭhāparanādanu māhēśvaranu.
`Śiva ēkō dhyēyaḥ śivaṅkaraḥ sarvaman'yatparityājyaṁ'
emba śruti mataviḍidu an'yadaivaṅgaḷaṁ biṭṭu
nim'manē dhyānisuvanayyā, nirantara nim'ma māhēśvaranu.
`Bhargō dēvasya dhīmahi dhiyō yō naḥ pracōdayāt'
emba śrutimataviḍidu nim'mane upāstiya māḍi
liṅgārcaneya māḍuvarayyā nim'ma māhēśvararu.
Adu kāraṇa nim'ma aikyava nim'ma māhēśvarane balla.Nim'ma māhēśvarādhikyava nīvē balliri.
Uḷida dēva dānava mānavādigaḷu ariyabahude?
Nim'ma ghanavanu, nim'ma māhēśvarara ghanavanu
śivane balla, śivana mīruva padavuṇṭe?
Sakalabrahmāṇḍavanū avagrahisikoṇḍippanāgi śivanu,
ā śivananavagrahisikoṇḍipparu māhēśvararu
aṇumahattinoḷage sampūrṇarapparu.
'Aṇōraṇīyānmahatō mahīyān' endudāgi,
`yathā śivastathā bhaktaḥ' endudāgi,
uriliṅgapeddipriya viśvēśvarayyana śaraṇara
mīrida pada uṇṭādare ballare hēḷi.
Be yourself.
Can the rest of God-giving humanists know?
Your Majesty, your Maheshwar's majesty
Lord Shiva, is there a word that transcends Lord Shiva?
Sakalabrahma mundanely insulted Shiva,
That is Maheshwar
Fucking inside.
As 'AnoraneeyanMahato Mahiyan',
As 'Yatha Shivasthatha Bhakta',
Surinara of Urilingapadipriya Visvesvaraya
Tell me if there is a word beyond that.
Open in Google Translate
•
Feedback