Index   ವಚನ - 77    Search  
 
ಏಕಮೂರ್ತಿ ತ್ರಿಧಾ ಭೇದವಾಯಿತ್ತು ಗುರುಲಿಂಗಜಂಗಮವೆಂಬುದನರಿಯಿರೆ. ಅರಿದು ಮತ್ತೇಕೆ ಮರೆದಿರಿ? ಲಿಂಗರೂಪಿನಲ್ಲಿ ಹಿರಿದ ಕೊಟ್ಟು ಜಂಗಮರೂಪಿನಲ್ಲಿ ಕಿರಿದ ಬೇಡಿಕೊಂಡು ಗುರುರೂಪಿನಲ್ಲಿ ಹಿರಿದು ಪರಿಣಾಮಿಸಿ ಮುಕ್ತಿಯ ಕೊಡುವನು. ಅಕಟಕಟ ಭಕ್ತಿಯನರಿಯರು, ಮುಕ್ತಿಗೆಟ್ಟಿತ್ತು. ಕೊಡುವವನು ಶಿವನು, ಶಿವನೆಂದರಿದು ಬದುಕಿರೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.