ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೆ ಲಿಂಗ, ಜೀವಾತ್ಮನೆ ಅಂಗ, ಸಂಗವೆ ಏಕಾತ್ಮ.
ತತ್ಪದವೆ ಪರಮಾತ್ಮ, ತ್ವಂ ಪದವೆ ಜೀವಾತ್ಮ,
ಅಸಿ ಪದವೆ ತಾದಾತ್ಮ್ಯವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Ondē vastu tanna līleyinda paramātma jīvātmanāyittu.
Ā paramātmane liṅga, jīvātmane aṅga, saṅgave ēkātma.
Tatpadave paramātma, tvaṁ padave jīvātma,
asi padave tādātmyavayyā,
uriliṅgapeddipriya viśvēśvarā.