ಕಾಮಧೇನು ಕಲ್ಪತರು ಚಿಂತಾಮಣಿ ಪರುಷ ಮೊದಲಾದ
ಮಹಾವಸ್ತುಗಳ ಮುಂದಿಟ್ಟುಕೊಂಡು
ಕಾಮಿಸುವ ಮನಸಿನೊಳಗಿರುತ ಇದಾನೆ ಕಾಣಾ,
ಈ ಕೊಡುವ ಗುಣವುಳ್ಳ ಮಹಾಶಿವನು.
ಹಿರಣ್ಯಪತಿ ಹಿರಣ್ಯಬಾಹು
ವರದಹಸ್ತನು ಅಭಯಹಸ್ತನು ಮಹಾದೇವನಿದಾನೆ.
ಒಲಿಯಲರಿಯಿರಿ ಒಲಿಸಲರಿಯಿರಿ
ಬೇಡಲರಿಯಿರಿ ಕೊಡಲರಿಯಿರಿ,
ಕೊಂಡು ಪ್ರಯೋಗಿಸಲರಿಯಿರಿ.
ನೀವು ಕೊಳಲರಿಯಿರಲ್ಲದೆ, ಶಿವನೇನೂ ಕೊಡಲರಿಯನೆ?
ಅಂಗಭೋಗಕ್ಕೆಂದಡೆ ಕೊಡನು,
ಲಿಂಗಭೋಗಕ್ಕೆಂದಡೆ ಕೊಡುವನು.
ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Kāmadhēnu kalpataru cintāmaṇi paruṣa modalāda
mahāvastugaḷa mundiṭṭukoṇḍu
kāmisuva manasinoḷagiruta idāne kāṇā,
ī koḍuva guṇavuḷḷa mahāśivanu.
Hiraṇyapati hiraṇyabāhu
varadahastanu abhayahastanu mahādēvanidāne.
Oliyalariyiri olisalariyiri
bēḍalariyiri koḍalariyiri,
koṇḍu prayōgisalariyiri.
Nīvu koḷalariyirallade, śivanēnū koḍalariyane?
Aṅgabhōgakkendaḍe koḍanu,
liṅgabhōgakkendaḍe koḍuvanu.
Idu satya śivanāṇe, uriliṅgapeddipriya viśvēśvarā