ಕುಲಕಷ್ಟಮತಿಹೀನನಿಗೆ ಉಪದೇಶವ ಕೊಡಲಾಗದು
ವಿಭೂತಿಯ ನೀಡಲಾಗದು,
ಕರ್ಣಮಂತ್ರವ ಹೇಳಿ ಲಿಂಗವ ಕಟ್ಟಲಾಗದು.
ಕಟ್ಟಿದರೂ ಹಿಂದಣ ಪೂರ್ವಜನ್ಮವ ಬಿಡದಿದ್ದಡೆ.
ಹೊಲೆಯರ ಮನೆಯ ಶ್ವಾನಬಳಗದಂತೆ.
ಕುಲಕಷ್ಟನಾದಡೆಯೂ ಆಗಲಿ
ಉಪದೇಶವ ಕೊಡಲಿ, ವಿಭೂತಿಯ ನೀಡಲಿ
ಕರ್ಣಮಂತ್ರವ ಹೇಳಲಿ, ಲಿಂಗವ ಕಟ್ಟಲಿ,
ಕಟ್ಟಿದಡೆ, ಸ್ವಪ್ನ ಜಾಗ್ರದಲ್ಲಿ ಶಿವಜ್ಞಾನಿಯಾಗಿದ್ದಡೆ
ಲೋಕಕ್ಕೆ ಆತನೇ ಉಪದೇಶಕರ್ತ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Kulakaṣṭamatihīnanige upadēśava koḍalāgadu
vibhūtiya nīḍalāgadu,
karṇamantrava hēḷi liṅgava kaṭṭalāgadu.
Kaṭṭidarū hindaṇa pūrvajanmava biḍadiddaḍe.
Holeyara maneya śvānabaḷagadante.
Kulakaṣṭanādaḍeyū āgali
upadēśava koḍali, vibhūtiya nīḍali
karṇamantrava hēḷali, liṅgava kaṭṭali,
kaṭṭidaḍe, svapna jāgradalli śivajñāniyāgiddaḍe
lōkakke ātanē upadēśakarta kāṇā
uriliṅgapeddipriya viśvēśvarā.