Index   ವಚನ - 114    Search  
 
ಚರಣ ವಿಶ್ವಂ ಸೂಕ್ತದಲ್ಲಿ- ಋಗ್ವೇದಕ್ಕೆ ದೇಹ ಉರುವರ್ಣ ಅತ್ರಿ ಗೋತ್ರ, ನಿರುತ ಗಾಯತ್ರಿ ಛಂದ, ಅಧಿದೇವತೆ ಅಜನು. ಯಜುರ್ವೇದಕ್ಕೆ ದೇಹ ತಾಮ್ರವರ್ಣ, ಭಾರದ್ವಾಜ ಗೋತ್ರ, ತ್ರಿಷ್ಟುಪ್ ಛಂದ, ಅಧಿದೇವತೆ ಅಧೋಕ್ಷಜನು. ಸಾಮವೇದಕ್ಕೆ ದೇಹ ಶ್ವೇತವರ್ಣ, ಕಾಶ್ಯಪ ಗೋತ್ರ ಅನುಷ್ಟಬ್ ಛಂದ, ಅಧಿದೇವತೆ ಭರ್ಗನು. ಅಥರ್ವಣರ್ವೇದಕ್ಕೆ ದೇಹ ಕೃಷ್ಣವರ್ಣ ವೈಭಾನು ಗೋತ್ರ,ಅನುಷ್ಟಬ್ ಛಂದ, ಅಧಿದೇವತೆ ಇಂದ್ರನು. ಆ ವೇದ ಸಂಭವರಾಗಿ ಆದಿ ವ್ರತಸ್ಥರಾಗಿ ರುದ್ರಾಕ್ಷೆಯಂ ಧರಿಸಿಹರು. ಸದಾಚಾರವೆಂತೆನಲು ವಿಭೂತಿಯ ಉದ್ಧೂಳಿತವ ಮಾಡಿಕೊಂಡಿಹರು. ಲಿಂಗಧಾರಕರೆಂಬುದಕ್ಕೆ ಶ್ರುತಿ: ಓಂ ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ' ಅಯಂ ಮೇ ವಿಶ್ವ ಭೇಷಹಃ ಅಯಂಶಿವಾಭಿರ್ಶನಃ' ಅಯಂ ಮಾತಾ ಅಯಂ ಪಿತಾ ಅಯಂಜೀವಾತುರಾಗಮತ್ ಇದಂತವಪ್ರಸರ್ಪಣಂ ಸಂಬಂಧವೇಹಿನಿರಿಹಿಃ ಎಂದು ತಮ್ಮ ಹಸ್ತವ ತಾವೆ ಹೊಗಳಿಕೊಳ್ಳುತ್ತಿಹವು. ಶಿವನ ಪಾದೋದಕ ಪ್ರಸಾದವನೆ ಕೊಳ್ಳುತ್ತಿಹವು. ವೇದಾಂತ ಕಾಮಯೇತಿಯೆನಲು: ಓಂ ಶವೋಯಾಮೈವ ಪಿತರಃಪಿತೃ ದೇವೋಭವ ಪಿತಾಶ್ಚಯಾ ಎಂದು ಶಿವನು ತಮ್ಮ ಜನಕನೆನುತಿಹವು. ಆ ಪರಿಯಲು ವೇದಸ್ವಯಂಭುವೆಂದೆಂಬೆನು, ಆ ಪರಿಯಲು ವೇದವೆ ದೈವವೆಂಬೆನು, ಶಿವನಲ್ಲಿ ಜನಿಸಿ ಶಿವನ ಭೃತ್ಯರಾಗಿ ಶಿವನ ಹೊಗಳುವ ವೇದವನೋದಿ ಆವ ಗತಿಯಾಗಬೇಕೆಂದು ನುಡಿವ ಬ್ರಾಹ್ಮಣಂಗೆ ಆದಿ ದೈವವಾದೆಂದರಿಯಿರಿ, ಓದಿನ ಗಿಳಿಯಂತಾದಿರಿ ದ್ವಿಜರೆಲ್ಲ. ಸಾಮದೇವ ಬಿನ್ನೈಸಿದ ಅರ್ಥ ವೇದಾಂತ ಪುರುಷೋಕ್ತಯೆಂದು ಹರಸಾರಾಯ ಪುರಾಣದೊಳು ವೈದಿಕ “ಓಂ ನಿನಾಂ ಪ್ರಣಮ್ಯತ ಸ್ತ್ರೀಣಾಂತಯೋದಿನಾಸ್ವದಂ” ಎಂದು ದೈವ ಈ ತೆರನಾಗಿಹವಲ್ಲಿ ಕೇಳು. ಇಂದ್ರನೊಕ್ಕಲಿಗ, ಬ್ರಹ್ಮ ವೈಶ್ಯ, ವಿಷ್ಣು ಕ್ಷತ್ರಿಯ, ರುದ್ರ ಉತ್ತಮದ ಬ್ರಾಹ್ಮಣನೆಂಬುದಕ್ಕೆ ತಾರ್ಕಣೆ ಆವುದೆಂದೊಡೆ: ಶಿವನನರ್ಚಿಸುವಾತನೆ ದ್ವಿಜನುಮ ಉಳಿದ ದ್ವಿಜರೆಲ್ಲಾ ಅಧಮರೆಂಬುದಕ್ಕೆ ಶ್ರುತಿ: “ತಥಾ ವಿಪ್ರಸ್ಯ ಸಂಬಂಧಂ ಶವೇನ ಸಹಯುಚ್ಯತೇ ಶಂಕರಃಸರ್ವದೇವಸ್ತು ಭೂಷಲಸ್ತು ಪುರಂದಃ ಪಿತಾಮಹಾಶ್ಚ ವೈಶಸ್ತು ಕ್ಷತ್ರಿಯೋ ಪರಮೋ ಹರಿಃ ಬ್ರಾಹ್ಮಣೋ ಭಗವಾನ್ ರುದ್ರೋ ಇಂದ್ರ ಶೂದ್ರೋಪಿ ಜಾಯತೇ ಮಹಾಬ್ರಾಹ್ಮಣಮೀಶಾನಾಂ ಯುಗಛಂವನರಿತರಃ ಸದಾಮಹಾತ್ಮಯಾನಂತರ ವಿರೂಪಾಕ್ಷಂ ದ್ವಿಜೋತ್ತಮಃ ಎಂದು ವಿಶ್ವೇಶರನ ಮುಖವಾಕ್ಯ ತಾನಾಗಿ ಹೇಳುತ್ತಿದೆ. ಆ ದ್ವಿಜರುಗಳಿಗೆ ಶಿವಜ್ಞಾನವೇಕಿಲ್ಲವೆಂದೆಡೆ” ದಧಿಚಿ ಬೈಗು ಗೌತಮ ಅಗಸ್ಯ ಮೊದಲಾದ ಶಿವಭಕ್ತರ ನಯಯಜ್ಞವ ಮಾಡಿದರಾಗಿ ಶಿವಜ್ಞಾನಹೀನರಾದ ಶಾಂಖ್ಯಾಯನ ವೈಷ್ಣವ ಬ್ರಹ್ಮಯೋಗ ಸೌರ ಗಾಣಾಪಥ್ಯ ಮಾಯಾವಾದಿ ಆರುಹಂತ ಔಧ್ಧಿಕ ಚಾವಾಱಕ ವ್ಯದಿಕ ಸಕಲರು, ನಿಷ್ಕಲರು ವೀಮಾಂಸಕ ನೀಲಪಟೃಆಳದ ಪಾಷಂಡಿಗಳಲ್ಲಿ ಹೇಸದೆ ದೀಕ್ಷೆಯಿಂ ಕೊಂಡು ಒಡಲ ಮುಡುಹುಂ ಸುಟ್ಟು ಮುಟ್ಟಿಯಂ ಇಟ್ಟು ಶಿವಸಮಯಮಂ ನಿಂದಿಸಿ ತೀಥಱಯಾತ್ರೆಗೆ ಹೊದ ಪಲವಂ ಮಾರಿಕೊಂಡು ತಿರಿಂದುಂಡು ಭ್ರಾಂತಗೆಟ್ಟು ಶಿವಶರಣರ ನಿಂದಿಸಿ ಪಾಪದಿಂದ ವಿಪ್ರರಧಮ ನರಕಕ್ಕೆ ಇಳಿಯಬೇಕೆಂದು ಆ ವೇದ ಮುಖ್ಯರು ಶಾಪಮಂ ಕೊಟ್ಟರು ದ್ವಿಜರ್ಗೆ ವಿಧಿಯಾಯಿತ್ತು ಕಾಣಾಮಾರಿಕೊಂಡು ತಿರಿಂದುಂಡು ಭ್ರಾಂತಗೆಟ್ಟು ಶಿವಶರಣರ ನಿಂದಿಸಿ ಪಾಪದಿಂದ ವಿಪ್ರರಧಮ ನರಕಕ್ಕೆ ಇಳಿಯಬೇಕೆಂದು ಆ ವೇದ ಮುಖ್ಯರು ಶಾಪಮಂ ಕೊಟ್ಟರು ದ್ವಿಜರ್ಗೆ ವಿಧಿಯಾಯಿತ್ತು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.