Index   ವಚನ - 118    Search  
 
ಜನ್ಮದ ಭವಬಂಧನವ ತೊಡೆಯಬಲ್ಲಡೆ ಷಡಕ್ಷರವೇ ಬೀಜಮಂತ್ರ, ಕಾಲಕರ್ಮದ ದೆಸೆಯನೊರಸಬಲ್ಲಡೆ ಶಿವನ ತನುಧೂಳಿತಮಪ್ಪ ಶ್ರೀವಿಭೂತಿ, ಸಟೆ ಕುಹಕ ಪ್ರಪಂಚ ಗೆಲಬಲ್ಲಡೆ ಮಹಂತರ ಸಂಗ, ಶುಕ್ಲಶೋಣಿತದ ತನುವಿನ ಕಲ್ಮಷವ ತೊಡೆಯಬಲ್ಲಡೆ ಜಂಗಮದ ಪಾದೋದಕ ಪ್ರಸಾದ, ಮನ ಬುದ್ಧಿ ಚಿತ್ತ ಅಹಂಕಾರವ ಗೆಲುವಡೆ ಏಕೋಭಾವನಿಷ್ಠೆ. ಇವು ತಾನೆ ತನ್ನೊಳಗಾಗೆ ಬೇರಾವುದೂ ಘನವಿಲ್ಲ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.