Index   ವಚನ - 146    Search  
 
``ನ ಗುರೋರಧಿಕಂ, ನ ಗುರೋರಧಿಕಂ, ನ ಗುರೋರಧಿಕಂ, ನ ಗುರೋರಧಿಕಂ, ವಿದಿತಂ ವಿದಿತಂ ವಿದಿತಂ ವಿದಿತಂ ಶಿವಶಾಸನತಃ ಎಂದು[ದು] ವಚನ. ಶ್ರೀಗುರು ಮತ್ರ್ಯಕ್ಕೆ ಬಂದು ಅಷ್ಟಾದಶಜಾತಿಗಳೊಳಗಿದ್ದರೇನು ಮರ್ತ್ಯನೆ? ಅಲ್ಲ. ಸಾಕ್ಷಿಃ 'ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಲಲಾಟಲೋಚನೇ ಚಾಂದ್ರೀ ಕಲಾಮಪಿ ಚ ದೋರ್ದ್ವಯಂ ಅಂತರ್ನಿಧಾಯ ವರ್ತೇ[s] ಹಂ ಗುರುರೂಪೋ ಮಹೇಶ್ವರಃ' ಎಂದುದಾಗಿ, ಶಿವನು ಗುರುರೂಪಾಗಿ ವರ್ತಿಸುತ್ತಿರ್ದನು. ಪರಶಿವೋ ಗುರುಮೂರ್ತಿಃ ಶಿಷ್ಯದೀಕ್ಷಾದಿಕಾರಣಾತ್ ಶಿಷ್ಯಾತೀತಂ ಮಹಾಚೋದ್ಯಂ ಚೋದ್ಯರೂಪಾಯ ವೈ ನಮಃ ಎಂದುದಾಗಿ, ಶಿಷ್ಯಂಗೆ ದೀಕ್ಷೆಯ ಮಾಡಿ ಕರುಣಿಸಿ ಬಂದ ಮಹಾಕರುಣಾಮೂರ್ತಿ ಸದಾಶಿವ ತಾನೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.