Index   ವಚನ - 151    Search  
 
ನಾನೊಂದು ಮಾಡೆಹೆನೆಂಬ ಪ್ರತಿಜ್ಞೆ ಎನಗೊಡ್ಡಿ, ನೀನದ ಕೆಡಸಿಹೆನೆಂಬ ಸ್ವತಂತ್ರಿಕೆಯ ನೀ ತಾಳುವೆ. ನಾ ಮುನ್ನ ಎಲ್ಲಿಯವನು ನೀ ಮಾಡದನ್ನಕ್ಕರ? ಆನೆಂಬ ಹರಿಬ್ರಹ್ಮಾದಿಗಳ ಚೈತನ್ಯಸ್ವರೂಪ ನೀನವಧಾರು ದೇವಾ, ಇಚ್ಛಾ ಜ್ಞಾನ ಕ್ರಿಯಾಶಕ್ತಿ ನಿಮ್ಮಿಚ್ಛೆ, ಎನ್ನಿಚ್ಛೆಯೆ? ಮಾಡಿಕೊಂಡ ಮದುವೆಗೆ ಹಾಡುತ್ತ ಹಂದರವನಿಕ್ಕೆಂಬ ನಾಡಗಾದೆಯ ಮಾತು ನಿಮಗಾಯಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.