Index   ವಚನ - 180    Search  
 
ಪ್ರಕೃತಿವಿಡಿದಿಹುದು ಪ್ರಾಣ, ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರುಲಿಂಗಜಂಗಮ. ಇಂತಿವರ ಪ್ರಸಾದ ಸಗುಣವೆಂದು ಹಿಡಿದು, ನಿರ್ಗುಣವೆಂದು ಬಿಡುವ ವ್ರತಗೇಡಿಗಳ ತೋರದಿರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.