Index   ವಚನ - 189    Search  
 
ಪ್ರಾಣಲಿಂಗ ಸ್ವಾಯತವಾದ ಶಿವಭಕ್ತಂಗೆ, ಸದ್ಭಕ್ತಿಮಾರ್ಗವ ಕ್ರೀ ನೋಡಾ, ಲೋಕಾಚಾರವ ಮಾಡಲಾಗದು, ಲೋಕದ ಬಳಕೆಯ ಬಳಸಲಾಗದು. ಲೋಕ ಲೌಕಿಕರಲ್ಲಿ ವರ್ತಿಸಲಾಗದು, ಲೋಕಾಚಾರವೆಲ್ಲವನು ಬಿಡಬೇಕು. 'ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಂ ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಸ್ಥಲಂ ಭವೇತ್' ಎಂದುದಾಗಿ, ಲೋಕಾಚಾರವ ತ್ಯಜಿಸಿ, ಶಿವಾಚಾರ ಸನ್ಮಾರ್ಗದಲ್ಲಿ ಪಂಚಾಚಾರ ನಿಯತಾತ್ಮನಾದ ಸದ್ಭಕ್ತನೆ ಪ್ರಾಣಲಿಂಗಿ. ಆ ಸದಾಚಾರವೆ ಸರ್ವಾಂಗಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.