Index   ವಚನ - 222    Search  
 
ಮೃಗಾದಿಗಳಂತೆ [ಆಚರಿಸಿದಡೇನು?] ದಾನಾದಿಗಳ ಕೊಟ್ಟಡೇನು? ಕ್ಷತ್ರಿಯರಂತೆ. ಅದೆಂತೆಂದಡೆ, ಶಿವನ ವಾಕ್ಯ: ಪಯೋಹಾರೀ ತು ಮಾರ್ಜಾಲೋ ನಗ್ನೋ ಮುಗ್ಧಃ ಪಿಶಾಚವತ್ ನಿತ್ಯಸ್ನಾನಶ್ಚ ಕಾಕಶ್ಚ ವಾಲ್ಮೀಕಾಃ ಸರ್ಪಜಾತಯಃ ತೃಣಂ ಭಕ್ಷಂತಿ ಪಶವಃ ವನವಾಸಿಮೃಗಾಸ್ತಥಾ [ಮಾ]ಸ್ತು ಚೈತಾನಿ ಕಾರ್ಯಾಣಿ ನ ಕರೋತಿ ಹಿ ಪಾರ್ವತಿ' ಎಂದುದಾಗಿ, ಆವ ಸಿದ್ಧಿಗಳಿಂದಲೂ ಫಲವಿಲ್ಲ, ಏನನೋದಿ ಏನ ಕೇಳಿ ಏನ ಹೇಳಿಯೂ ಫಲವಿಲ್ಲ, ಇವು ಭಕ್ತಿಯೊಳಗಲ್ಲ, ಮುಕ್ತಿಗೆ ಸಲ್ಲವು. ಇದನರಿದು ಆವನಾನೊಬ್ಬನು ಲಿಂಗವರಿತು ಲಿಂಗಾರ್ಚನೆಯಂ ಮಾಡಿ, ಗುರುಲಿಂಗಜಂಗಮಕ್ಕೆ ತನುಮನಧನವ ಸವೆಸಿದಡೆ ಅದೇ ಚಲ್ವ ಭಕ್ತಿ, ಅದೇ ಚಲ್ವ ಮುಕ್ತಿ, ಅದೇ ಸರ್ವಸಿದ್ಧಿ. ಅದೇ ಸರ್ವಕಾರಣವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.