`ಯಥಾ ಬೀಜಂ ತಥಾಂಕುರಂ' ಎಂಬ ವಾಕ್ಯ ತಪ್ಪದು,
ಕಲ್ಪವೃಕ್ಷದ ಬೀಜದಿಂದಾದ ಸಸಿ, ಕಲ್ಪವೃಕ್ಷವಪ್ಪುದು ತಪ್ಪದು,
ದಿಟದಿಟ ತಪ್ಪದು ನೋಡಾ.
ಕಾಮಧೇನುವಿನ ಶಿಶು ಕಾಮಧೇನುವಪ್ಪುದು ತಪ್ಪದು
ದಿಟದಿಟ ನೋಡಾ.
ಸದ್ಗುರುವಿನಿಂದಾದ ಶಿಷ್ಯನು ಸದ್ಗುರುವಪ್ಪುದು ತಪ್ಪದು
ದಿಟದಿಟ ನೋಡಾ.
`ಯಥಾ ಬೀಜಂ ತಥಾಂಕುರಂ' ಎಂಬ ವಾಕ್ಯ ತಪ್ಪದು
ಶಿವನೇ ಬಲ್ಲನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Yathā bījaṁ tathāṅkuraṁ' emba vākya tappadu,
kalpavr̥kṣada bījadindāda sasi, kalpavr̥kṣavappudu tappadu,
diṭadiṭa tappadu nōḍā.
Kāmadhēnuvina śiśu kāmadhēnuvappudu tappadu
diṭadiṭa nōḍā.
Sadguruvinindāda śiṣyanu sadguruvappudu tappadu
diṭadiṭa nōḍā.
`Yathā bījaṁ tathāṅkuraṁ' emba vākya tappadu
śivanē ballanu, uriliṅgapeddipriya viśvēśvarā.