ಲಿಂಗವಂತನು ಲಿಂಗಾಚಾರಿ
ಸದಾಚಾರಿ ಭೃತ್ಯಾಚಾರಿಯೆನಿಸಿದಡೆ
ಲಿಂಗವನೊಲಿಸಬಹುದು.
ಲಿಂಗದ ನಚ್ಚು, ಲಿಂಗವಂತರ ಮೆಚ್ಚು.
ಇದು ಸತ್ಯ ಮುಕ್ತಿ ಕೇಳಿರಣ್ಣಾ.
ಲಿಂಗವಂತನು ಪರಧನ, ಪರಸ್ತ್ರೀ,
ಪರದೈವಕ್ಕಳುಪಿ ಅಲ್ಲಿಯೇ [ವರ್ತಿಸಿ]
ಮಾಹೇಶ್ವರಶೋಭೆಯಂ ಮಾಡಿಹೆನೆಂಬ,
ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ,
ಲಿಂಗವನೊಲಿಸಿಹೆನೆಂಬ, ಲಿಂಗವಂತರಲ್ಲಿ ಸಲುವೆನೆಂಬ,
ಲಿಂಗವೇನು ತೊತ್ತಿನ ಮುನಿಸೆ?
ವೇಶ್ಯೆಯ ಸರಸವೇ? ವೈತಾಳಿಕನ ಕಲಹವೆ?
ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ
ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ.
ಪತಿವ್ರತೆಯು ಸತ್ಪುರುಷನ ಕೂಡಿದಂತೆ,
ಸಜ್ಜನಮಿತ್ರರ ಸಂಗದಂತೆ, ಮಹಾಜ್ಞಾನಿಗಳ ಅರಿವಿನಂತೆ,
ಶುದ್ಧವಾದುದನೇ ಕೂಡಿಕೊಂಡಿಪ್ಪ,
ಶುದ್ಧವಿಲ್ಲದುದನೇ ಬಿಡುವ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ.
Art
Manuscript
Music
Courtesy:
Transliteration
Liṅgavantanu liṅgācāri
sadācāri bhr̥tyācāriyenisidaḍe
liṅgavanolisabahudu.
Liṅgada naccu, liṅgavantara meccu.
Idu satya mukti kēḷiraṇṇā.
Liṅgavantanu paradhana, parastrī,
paradaivakkaḷupi alliyē [vartisi]
māhēśvaraśōbheyaṁ māḍ'̔ihenemba,
matte liṅgārcaneyaṁ māḍ'̔ihenemba,
liṅgavanolisihenemba, liṅgavantaralli saluvenemba,
liṅgavēnu tottina munise?Vēśyeya sarasavē? Vaitāḷikana kalahave?
Tappi naḍedu, tappi nuḍidu, tappi kūḍi
maraḷi maraḷi prayōgisuvantāgi, antalla kēḷiraṇṇā.
Pativrateyu satpuruṣana kūḍidante,
sajjanamitrara saṅgadante, mahājñānigaḷa arivinante,
śud'dhavādudanē kūḍikoṇḍippa,
śud'dhavilladudanē biḍuva.
Nam'ma uriliṅgapeddipriya viśvēśvaranu
aṇumātra tappa, kṣaṇamātra sairisa.