Index   ವಚನ - 278    Search  
 
ವೇದಾದಿ ಅಷ್ಟಾದಶವಿದ್ಯೆಗಳ ಸರ್ವಮಂತ್ರಗಳ ಮೂಲವು ಶ್ರೀಪಂಚಾಕ್ಷರಿ. ಶಿವಾದಿಸರ್ವತತ್ತ್ವ ಮೂಲವು, ಶ್ರೀಗುರುಲಿಂಗಜಂಗಮ ಪ್ರಾಣಸರ್ವಮೂಲವು, ಶ್ರೀಗುರು ಕರುಣಿಸಿದ ಮಹಾಲಿಂಗದೀಕ್ಷೆ ಶಿಕ್ಷೆ ಸರ್ವಭೋಗಾದಿ ಭೋಗಂಗಳೆಲ್ಲವಕ್ಕೆಯು ಶಿವನ ಸಾಕಾರಮೂರ್ತಿ ಮೂಲವು, ಜಂಗಮ ಕೇವಲ ಮುಕ್ತಿಮೂಲವು, ದಾಸೋಹ ಜ್ಞಾನಮೂಲವು, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.