Index   ವಚನ - 323    Search  
 
ಸಕಲಜನರು ಹೇಸಿದ ಉದಾನವ ಶ್ವಾನ ಭುಂಜಿಸಿ ತನ್ನ ಹೊಟ್ಟೆಯ ಹೊರೆವುದಲ್ಲದೆ. ತನ್ನ ತಾ ಹೇಸಿದ ಉದಾನವ ಮುಟ್ಟದು ನೋಡಾ. ಶ್ವಾನಗಿಂದವೂ ಕಡೆಯೆ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ, ಮರಳಿ ಭವಿಯ ಬೆರಸಿದಡೆ ಅವ ಭಕ್ತನಲ್ಲ, ಅವ ಶ್ವಾನನಿಂದ ಕರಕಷ್ಟ. ಇದು ನೀನೊಲಿದ ಶರಣಂಗಲ್ಲದೆ ಎಲ್ಲರಿಗೇಕಹುದು ಹೇಳಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.