Index   ವಚನ - 324    Search  
 
ಸಕಲವ ಪೂಜಿಸಿಹೆನೆಂಬವಂಗೆ, ಸಕಲವನು ಲಿಂಗದಲ್ಲಿಯೇ ಪೂಜಿಸಬೇಕು. ನಿಷ್ಕಲವ ಪೂಜಿಸಿಹೆನೆಂಬವಂಗೆ, ನಿಷ್ಕಲವನು ಲಿಂಗದಲ್ಲಿಯೇ ಪೂಜಿಸಬೇಕು. ಅದೆಂತೆಂದಡೆ: ಸಕಲನಿಷ್ಕಲಾತ್ಮನು, ಸಕಲನಿಷ್ಕಲಾತೀತನು ಲಿಂಗಾರ್ಚನೆಯಿಂದ ಪರ ಒಂದು ಇಲ್ಲಾಗಿ ಒಳಹೊರಗೆಂಬ ಭಾವ ಅಳಿದುಳಿದ ಶರಣನ ಅಂತರಂಗಬಹಿರಂಗಭರಿತನಾಗಿಹನು ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.