ಸಕಲವೆಂದು ನಿಃಕಲವೆಂದು ಸಂಪಾದಿಸುವ ಷಡ್ದರ್ಶನಂಗಳು
ಸಮಸ್ತ ಮತಮಗಲಳು ಪರವಸ್ತುವನರಿಯದೆ
ಸಂಕಲ್ಪ ಸಂಶಯವೆಂದು ದೂರವಾದರು ನೋಡಾ. ಅದೆಂತೆಂದೂಡೆ:
ಶೈವ ಕುರುಹಿಟ್ಟು ಒಂದು ಲಕಷ್ಯವ ಅಲ್ಲಿಯೆ ಮಗ್ನವಾದ.
ಸಾಕ್ಷಿ:
“ವಿಶ್ವಾದ್ಯದಿತ್ಕೃತು ಶೂಲಪಾಣಿ
ರಿತ್ಯಸ್ಯಂ ಸದ್ಯ ವಾಮಘೋರ ಪರತದಿಶಾನ
ಸ್ವಶಕ್ತಿಮಾತ್ರಂ ಯದ್ದೇವಾ ಹೃದಯೇ ಪೂರ್ಣಂ
ವಿಂತಿದುತ ಮನನಾ ದೇವತಾ ಮರ್ಹಣಿ ಮಂಗಳಂ
ಶಿವಂ ರುದ್ರಂ ಏಕಂ ವಸ್ತು”
ಎಂಬ ಶೈವನ ಸಂಪ್ರದಾಯ ಸಂಪತ್ತು ಅದಂತಿರಲಿ.
ಇನ್ನು ವೈಷ್ಣವ ಕುರುಹಿಟ್ಟು ಒಂದು ಲಕ್ಷ್ಯ ಅಲ್ಲಿಯೆ ಮಗ್ನವಾದ.
“ಯದ್ಯಮಾಯೇವ ಹದಂ ಮಧ್ಯತ್ವಸ್ಮನ್
ತೇನೋ ಮಾಯಾಮಯಂ ಮನೋಹತಂ ಬ್ರಹ್ಮ
ವಿಶ್ವರೂಪೋತಯಾಮಿ”
ಎಂಬ ವೈಷ್ಣವಿನ ಸಂಪ್ರದಾಯ ಸಂಪತ್ತು ಅದಂತಿರಲಿ.
ಇನ್ನು ಸಾಂಖ್ಯನೊಂದು ಲಕ್ಷವ ಕುರುಹಿಟ್ಟುಲ್ಲಿಯೆ ಮಗ್ನವಾದ.
‘ಯಸ್ಮಾಯೇ ಚತಿ ಶೃತ್ವಾಯೇಣಂ ವಿನಿಯ್ಯಾತಸ್ತಿಶ್ಚಬ್ದಂ
ತತ್ವಮಸಾರ್ಥ್ಯಕ್ರೌಚಾಯಮಂತಿ ಪರಮಶ್ಯಮಿ ತಿಷ್ಟಂ
ಸಮಂ ಸಹ ಸಂಪಶ್ಯಂ ಐನಿತ್ಯಂ ಮಹಣಸಯೇವಾ”
ಎಂಬ ಸಾಂಖ್ಯನ ಸಂಪ್ರದಾಯ ಸಂಪತ್ತು ಅದಂತಿರಲಿ.
ಇನ್ನು ಗಾಣಪತ್ಯ ಒಂದು ಲಕ್ಷ್ಯ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
“ಆತ್ಮಯೇವತಿ ಮಾಯಕ ಕರ್ಮ ಕರೋತಿ ತಸ್ಯ ಹಿಮಾಕ್ಷತಮಘಮಸಿತಂ
ಯದ್ಯರೂಪಂ ಏಷಾತ್ ನಿರ್ಮಾಲ್ಯ ನೀರಹಂ”
ನಿರ್ವಾಣ ನಿಜಂ ಸ್ಯಾತ್ ಪ್ರಸಾದೋದನ್ಯಮಂತಿಃ”
ಇನ್ನು ಗಾಣಪತ್ಯನ ಸಂಪ್ರದಾಯ ಸಂಪತ್ತು ಅದಂತಿರಲಿ.
ಇನ್ನು ಸೌರನ ಒಂದು ಲಕ್ಷ್ಯವ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
ಅದುನ್ವಂ ಸಂತಿ ಸಮುದಂ ಸಮಿತಂ ನ್ಯಸ್ತ
ಯಸ್ಯ ವಾಚ್ಯಂ ಪ್ರವಿಸ್ಥಂ ಪ್ರಸ್ಫುರಾದಿ ಆದ್ಯಮಾನ
ಸಾಮಾಯನಾಶ ನಿರತಿಶಯ ನಿಜಂ ನಿತ್ಯಾಯತ್ಂಶತಿಯವಸ್ತು
ಎಂಬ ಸೌರನ ಸಂಪ್ರದಾಯ ಸಂಪತ್ತು ಅದಂತಿರಲಿ.
ಇನ್ನು ಕಾಪಾಲಿಕ ಒಂದು ಲಕ್ಷ್ಯವ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
“ಪಿಂಡೇಬೂ ಅನ್ನ ಪಾನ್ಯಹಿತಂ
ತಮ ಅರ್ಕ ಸೋಮನಾತ್ಮಾ ಕಳೇವರೇಸ್ಸಧ್ಯಂ
ದ್ಯತ್ವಾಚಕ್ರೇಷಟ್ ದಿಶಾಮಗಹಿತಂ
ಆದ್ಯಮಾಯಾತೀತಂ ನಾಥಯೇ ಭಯಂಕರಂ ಮಹತ್”
ಎಂಬ ಕಾಪಾಲಿಕನ ಸಂಪ್ರದಾಯ ಸಂಪತ್ತು ಅದಂತಿರಲಿ.
ಇನ್ನು ವೇದಾಂತಿಯೆಂಬಾತನು ಒಂದು ಲಕ್ಷ್ಯವ ಕುರುಹಿಟ್ಟು
ಅಲ್ಲಿಯೆ ಮಗ್ನವಾದ.
“ತಾಮಸನಾತ್ಮೋ ಜಡಃ ಕೃತಿದೋಷೇತನ್ಮಯ ಪಾಶೋಸ್ಥ
ವಿದಂ ನಾಶೇತಿ ಮಾರ್ಗೇ ಚಿದಾಕಾಶೇ ನಿಭಾಶ್ಚಂ ಸೂಕ್ಷ್ಮಕಳಾಬ್ರಹ್ಮಂ”
ಎಂಬ ವೇದಾಂತಿಯ ಕರ್ತವ್ಯ ಅದಂತಿರಲಿ.
ಇನ್ನು ಆತ್ಮಯೋಗಿಯೆಂಬಾತ ಒಂದು ಲಕ್ಷ್ಯವ ಕುರುಹಿಟ್ಟು
ಅಲ್ಲಿಯೆ ಮಗ್ನವಾದ.
“ದೇಹಸ್ಯ ದೇಹಿ ದೇಹೋಹಂ ದೇಹ ಮಹಾತ್ಮೋ
ಚೈತನ್ಯ ಸ್ವಯಂನ್ಮೇನಾ ಬಿಂದೇ ಕಳಾಯ ಕರಣಂ ಪ್ರಭಾತೇಂದ್ರಿಯ
ಸಾಕ್ಷಿ ಜ್ಯೋತಿಯಸ್ಯನ್ ತರ್ಜ್ಯದೌನಾಸ್ತಿ ಆತ್ಮ”
ಎಂಬ ಆತ್ಮಯೋಗಿಯ ಮಾತದಂತಿರಲಿ.
ಇನ್ನು ಬೌದ್ಧನೆಂಬಾತ ಒಂದು ಲಕ್ಷ್ಯವ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
“ಕುರುಷ್ಯ ದೇಹೋ ಅಹಿಂಸಸ್ಯ ಕಾಯೋನಾತ್ಮಂ
ತನ್ನಾತ್ಮ ಲಕ್ಷಣೇ ಲಕ್ಷಂ ಭಾಗಂ ದೇಹಸ್ಯ
ದೌಮಾತ್ರತ್ರಯಸ್ಮಗ್ಮಂ ಪೂರ್ಣಂ ದ್ರುತ್ಯದೃತಿತಂರ್ದ್ಮಭಾತಿ”
ಎಂಬ ಬುದ್ಧನ ವಿವೇಕ ಅದಂತಿರಲಿ.
ಇನ್ನು ಮಾಯಾವಾದಿ ಒಂದು ಲಕ್ಷ್ಯವ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
“ಪಂಚೌಪ್ರದಾನೇ ಭೋದೇಯೇತ್ಯಸ್ತದೇಹಿ
ಮರ್ಧಯಸ್ಥಂ ಸಯೇವ ಬ್ರಹ್ಮ ಮಾದವ ರುದ್ರೇಶ್ವರಾ”
ಶಿವಸದಾ ಪಂಚಮುಕ್ತಂಶಿವಾಯ
ವಿಷ್ಣುರೂಪಾಯ ಶಿವರೂಪಾಯ ವಿಷ್ಣುವೇ
ಶಿವಸ್ಯ ಹೃದಯಂ ವಿಷ್ಣು ವಿಷ್ಣೋಶ್ಚ ಹೃದಯಂ ಶಿವ” ಎಂದು
ಯೇತೇ ಬ್ರಹ್ಮ ಪಂಚಕಂ ಸ್ಯಾತ್
ಸಯೇಕಂ ವಿಶ್ವಮಯ ಶಕ್ತಿಯೋ ವಿಶ್ವಂ ವಿಶ್ವಾತ್ಮನೇಕರುದ್ರೋದ್ವತೀಯಂ”
ಎಂಬ ಮಾಯಾವಾದಿ ಅರಿವು ಅದಂತಿರಲಿ.
ಇನ್ನು ಮೀಮಾಂಸಕನೊಂದು ಒಂದು ಲಕ್ಷ್ಯವ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
“ನಾಸ್ತಿದೇಹಿ ಕರಣಂ ಖಃ ಮದ್ಯನೇ ನ್ಪ
ಸ್ಯಾತ್ಮನಾಯೇಕಂ ಮತ್ಕಂಷರೌ ಸದಾತ್ಮನೇ ನಿತ್ಯಂ ಮಾನ”
ಎಂಬ ಮೀಮಾಂಸಕನ ಬಗೆದಂತಿರಲಿ.
ಇನ್ನು ಶೂನ್ಯವಾದಿಯ ಒಂದು ಲಕ್ಷ್ಯವ ಕುರುಹಿಟ್ಟು ಅಲ್ಲಿಯೆ ಮಗ್ನವಾದ.
“ದೇಹಾಯಿಂದ್ರಿಯಕರಣಂ ನಾಸ್ತಿ
ಯೇವಮ ನಾಸ್ತಿ ಸ್ವರ್ಗಂ ನಾಸ್ತಿ
ಮಾಯಾಮಯಂ ಜಡಂ ಪ್ರಕೃತಿಯಿತ್ಯದ್ಯೌ ನರಕಃ
ನರಕಃ ಪಾಪಂ ನಾಸ್ತಿ ಯದೋ ಜೀವ ಪ್ರಜ್ಞ ಜ್ಞಾನವಾಸಿ
ಆಕಾಶ ವಾಯೇ ಯೇಕಮಾಸಾರ್ದಂ ದೃಶ್ಯಂ ಮಿದಂ
ಕೌಳಿಕಂ ಜಡಕರ್ಮದೃತಂ ನಾಸ್ತಿನಮಿದಂ ಶೂನ್ಯಂ ನಿತ್ಯಂ ವಸ್ತು”
ಎಂಬ ಶೂನ್ಯವಾದಿಯ ಕರ್ಮ ಅದಂತಿರಲಿ.
ಇಂತೀ ಷಡ್ ದರ್ಶನ ಷಣ್ಮತಂಗಳ ಬಗೆಯಲ್ಲ.
ವೀರಶೈವ ಸಿದ್ಧಾಂತಿಯ ಬಗೆ. ಅದೆಂತೆಂದೊಡೆ:
“ಏಕೋಸ್ವಾ ಶಕ್ತಿ ಭಿನ್ನ ಬಹು ನ ಸ್ಯಾತ್ ವಿವೇಯಾಶಕ್ತಿನಾಸ್ತಿ
ನಾಸ್ತಿದ್ವಯಂ ಶೂನ್ಯಗರ್ಭೀಕೃತಂ ಮಾತ್ಮವಸು”
ಎಂಬ ವೀರಶೈವ ಸಿದ್ಧಾಂತಿಯ ನಿಶ್ಚಯವು.
ಇನ್ನು ಶೈವನೆಂಬುವನು ಪಂಚಮುಖ ದಶಮುಖ ಸಕಲಕರ್ತನೆಂಬನು,
ಶೈವಗಮೇ ಮುಖಪಂಚ ದಶಂ ಹಸ್ತಂಮಾಯುಧಂ ಶತೃರೂಪಕಂ
ಉತ್ಪತ್ತಿ ಸ್ಥಿನಾಶಾದಿ ಕರ್ತವ್ಯಂ ಪರಮೇಸ್ವರಃ:
ಎಂಬುನಾಗ, ಇದು ಹುಸಿ.
ಇನ್ನು ವೈಷ್ಣವೆಂಬುವನು ವಿಯಜ್ಞಾನವೆಂಬ ಗರುಡನ ಗಮನವಾಗಿ
ಸಮಸ್ತಣಂದಸ್ವಯ ನಾರಾಯಂ ವಿಶ್ವರೂಪನೆಂಬುನು. ವೈಷ್ಣಾಗಮೇ:
“ವಿಯದ್ವಿಷ್ಣುಪದಂ ವಾಪಿ ಸರ್ವಾನಂದಸಯಾಶ್ರಯಂ
ವಿಶ್ವರೂಪಸ್ಯ ಪುರುಷಂ ನಾರಾಯಣೈವ ವಸ್ತುವತ್”
ಎಂಬನಾಗಿ, ಇದು ಹುಸಿ.
ಇನ್ನು ಸಾಂಖ್ಯ ದರ್ವತಂತ್ರನಾಗಿಹನು.
ಆ ಕರ್ಮತಂತ್ರಕ್ಕೆ ಸಾಕ್ಷಯಾದ ಮಂತ್ರಸ್ವರೂಪಾದ ಪಶುಪತಿಯೆಂಬನು.
ಶಾಕ್ತ ಗಮೇ:
“ಕರ್ಮತಮತರ್ಸ್ಯ ರೂಪಖ್ಯ ತತ್ರೇ ಕರ್ತು ಸಮಾಹಿತಂ
ಸಾಕ್ಷಿರೂಪತ್ಮನೈವಸ್ತು ಇದಂ ವಸ್ತು ಸುನಿಶ್ಚಯಂ
ಎಂಬನಾಗಿ, ಇದು ಹುಸಿ.
ಇನ್ನು ಗಾಣಪರ್ಯನೆಂಬುವನು ಆತ್ಮನು ಜಡನಾಗಿಹನು.
ಆ ಜಡವಳಿಯಲು ಆತ್ಮನೆ ವಸ್ತು ಸರ್ವದೋಷರಹಿತನೆಂಬನು
ಗಾಣಪತ್ಯಾಮೇ:
“ಕರ್ಮಾದಿಜಡದೋಷಾನಾಂ ಜೀವಂ ಪಾಶಾದಿ ಲಕ್ಷಣಃ
ತತ್ ಪಾನಾಶ ನಿರ್ವಾಣಂ ದೋಷಂ ಪಾಶಾದಿ ವಸ್ತುವತ್”
ಎಂಬನಾಗಿ, ಇದು ಹುಸಿ.
ಇನ್ನು ಸೌರನೆಂಬವನು ರೂಪವಲ್ಲ ನಿರೂಪ ನಿರವಯನು. ಸೌರಾಗಮೇ:
“ರೂಪಂ ನಾಸ್ತಿ ನಿರೂಪಃ ಸ್ಯಾತ್ ಸರ್ವಾಂಕಾರಂ ಚ ನಾಸ್ತಿವತ್”
ನಾನಾಶರ್ಯಮಿದಂ ನಾಸ್ತಿ ಸ್ಯಾತ್ ಕರ್ತಾರಂ ಪರಬ್ರಹ್ಮವತ್
ಎಂಬನಾಗಿ, ಇದು ಹುಸಿ.
ಇನ್ನು ಕಾಪಾಲಿಕನೆಂಬಾತನು ಆರು ಚಕ್ರದೊಳಗೆ
ತೋರುವ ಛಾಯೆ ವಸ್ತುವೆಂಬನು. ಭೈರವಾಗಮೇ:
“ಷಡುಚಕ್ರ ಭವೇದ್ಯಸ್ತು ಸ್ವರೂಪಂ ಛಾಯಮಾತ್ಮಾನಾ’
ಈವ್ಯಶೈಭೈರವನ್ನಸ್ತು ವಸ್ತುಮೇವ ನ ಸಂಶಯಃ”
ಎಂಬನಾಗಿ, ಇದು ಹುಸಿ.
ಇನ್ನು ವೇದಾಂತಿಯೆಂಬವನು
ಚಿನ್ಮಾತ್ರನು ಚಿತ್ಸ್ವರೂಪನು ತಾನೆಯೆಂಬನು.
ಯೋಗಶಾಸ್ತ್ರೇ:
“ಅಜಡಾಯ ಅನಂತಾಯ ಅಸ್ವಪ್ನಾಯ ಮಹಾಮತೈಃ
ಯದ್ರೂಪಂಚಿನಿದ್ರಾಯ ತದ್ರೂಪಂ ಪರಮಾತ್ಮನಾ”
ಎಂಬನಾಗಿ, ಇದು ಹುಸಿ.
ಇನ್ನು ಆತ್ಮಯೋಗಿಯೆಂಬಾತನು
ದೇಹ ನಾನಲ್ಲ. ದೇಹಿ ನಾನಲ್ಲ. ಸಾಕ್ಷಾಜ್ಯೋತಿಯೆ ಆತ್ಮವಸ್ತುಯೆಂಬನು.
ಜ್ಞಾನಕಾಂಡೇ:
“ಜಡೋಯಸ್ಯ ಶರೀರಾಣಾಂ ಜಡಾಜಡಸ್ಯಯಾತ್ಮನಃ
ಅಜಡಃ ಪರಮೇಶಾನಾಂ ಸ್ತ್ರಾಯಂತಾತ್ಮ ಪ್ರಕೀರ್ತೀತಃ”
ಎಂಬನಾಗಿ, ಇದು ಹುಸಿ.
ಇನ್ನು ಬೌದ್ಧನೆಂಬಾತನು ದೇಹ ನಾನಲ್ಲ ದೇಹಿಯಲ್ಲ.
ಆತ್ಮನಲ್ಲ ವಸ್ತುವಲ್ಲ ಇಲ್ಲದುದೆಯಿಲ್ಲವೆಂಬನು.
“ದೇಹದೇವಂ ಚ ಆತ್ಮಸ್ಯ ವಸ್ತುಮಂ ಸರ್ವನಾಸ್ತಿವತ್
ಎಂಬನಾಗಿ, ಇದು ಹುಸಿ.
ತತ್ವಯೋ ಹುಸಿ. ನಾಸ್ತಿ ತನ್ನಾಸ್ತಿ ಸರ್ವನಾಸ್ತಿ ಮಹಂ ಮಹತ್”
ಎಂಬನಾಗಿ, ಇದು ಹುಸಿ.
ಇನ್ನು ಮಾಯಾವಾದಿಯೆಂಬಾತನನು ಪಂಚಬ್ರಹ್ಮವಿಶ್ವಮಯ ವಿಶ್ವನು
ಶಿವವಿಷ್ಣುಶಕ್ತ್ಯಾತ್ಮಕಂ ಸರ್ವಹೃದಯನೆಂಬನು. ಬ್ರಹ್ಮಾಂಡ ಪುರಾಣೇ”
“ಪಂಚಬ್ರಹ್ಮಮಯಂ ವಿಶ್ವ ಪಂಚರೂಹೋ ಸದಾಶಿವಃ”
ಶಿವವಿಷ್ಣೋಶ್ಚ ಸಂಬಂಧಂ ಯೇಕಮೇವಾತ್ಮ ಮದವಯಂ”
ಎಂಬನಾಗಿ, ಇದು ಹುಸಿ.
ಇನ್ನು ಮೀಮಾಂಸಕನೆಂಬನು
ದೇಹ ಹುಸಿ ಇಂದ್ರಿಯಂಗಳು ಹುಸಿ, ಕರಣಂಗಳು ಹುಸಿ,
ಇನ್ನೊಂದು ದೇವರಿಲ್ಲ ತಾನೆ ಬ್ರಹ್ಮವೆಂಬನು. ತರ್ಕಾಗಮೇ:
“ದೃಶ್ಯಂ ನಾಸ್ತಿ ವಿಭೋದೇನ ಮನಸೋದೃಶ್ಯಮಾರ್ಜನಂ
ಸಂಪದಶ್ಚೇತದುತ್ಪನ್ನಂ ಪರಿನಿರ್ವಾಣ ನಿರ್ವಿತ್ರೀ:
ಎಂಬನಾಗಿ, ಇದು ಹುಸಿ.
ಇನ್ನು ಶೂನ್ಯವಾದಿಯೆಂಬಾತನು.
ಆತ್ಮನಲ್ಲ, ಕರಣ ಮನ ಇಂದ್ರಿಯಂಗಳಿಲ್ಲ, ಸ್ವರ್ಗನರಕಗಳಿಲ್ಲ,
ಹಿಂದು ಮುಂದಿಲ್ಲ, ನಾನು ನೀನು ತಾನು ಏನೂ ಇಲ್ಲಯೆಂಬನು.
ಜ್ಞಾನಸಾರೇ” ಅನುತಿಷ್ಠ ಕರ್ಮಾಣಿ ಪರಲೋಕಾನುಸಾದಯೇತ್
ಸರ್ವಲೋಕಶ್ಚಮಾತ್ಮಾನಾಂ ಅನು ತಿಷ್ಪಂ ಕಿಂ ಪ್ರಯೋಜನಂ”
ಎಂಬನಾಗಿ, ಇದು ಹುಸಿ.
ಇಂತೀ ಷಡ್ದರ್ಶನ ಷಡ್ಮತಂಗಳ ಹುಸಿಯೆಂಬ ವೀರಶೈವವೆಂತೆಂನೆಂದಡೆ:
ಒಂದೆ ಆಕಾಶ ಘಟಪ್ರಭೇಧದಿಂದ ಹಲವಾಕಾಶವಾದ ಹಾಂಗೆ,
ಶಕ್ತಿಯ ಭೇಧದಿಂ ಶಿವ ಜೀವರಾದರು.
ಇದನರಿತು ಆಭೇಧವಳಿಯಲು ಶಿವ ಜೀವರೊಂದಿಯೆಂಬನು.
Art
Manuscript
Music
Courtesy:
Transliteration
Sakalavendu niḥkalavendu sampādisuva ṣaḍdarśanaṅgaḷu
samasta matamagalaḷu paravastuvanariyade
saṅkalpa sanśayavendu dūravādaru nōḍā. Adentendūḍe:
Śaiva kuruhiṭṭu ondu lakaṣyava alliye magnavāda.
Sākṣi:
“Viśvādyaditkr̥tu śūlapāṇi
rityasyaṁ sadya vāmaghōra paratadiśāna
svaśaktimātraṁ yaddēvā hr̥dayē pūrṇaṁ
vintiduta mananā dēvatā mar'haṇi maṅgaḷaṁ
śivaṁ rudraṁ ēkaṁ vastu”
Emba śaivana sampradāya sampattu adantirali.
Innu vaiṣṇava kuruhiṭṭu ondu lakṣya alliye magnavāda.
“Yadyamāyēva hadaṁ madhyatvasman
tēnō māyāmayaṁ manōhataṁ brahma
viśvarūpōtayāmi”
emba vaiṣṇavina sampradāya sampattu adantirali.
Innu sāṅkhyanondu lakṣava kuruhiṭṭulliye magnavāda.
‘Yasmāyē cati śr̥tvāyēṇaṁ viniyyātastiścabdaṁ
tatvamasārthyakraucāyamanti paramaśyami tiṣṭaṁ
samaṁ saha sampaśyaṁ ainityaṁ mahaṇasayēvā”
emba sāṅkhyana sampradāya sampattu adantirali.
Innu gāṇapatya ondu lakṣya kuruhiṭṭu alliye magnavāda.
“Ātmayēvati māyaka karma karōti tasya himākṣatamaghamasitaṁ
yadyarūpaṁ ēṣāt nirmālya nīrahaṁ”
nirvāṇa nijaṁ syāt prasādōdan'yamantiḥ”
innu gāṇapatyana sampradāya sampattu adantirali.
Innu saurana ondu lakṣyava kuruhiṭṭu alliye magnavāda.
Adunvaṁ santi samudaṁ samitaṁ n'yasta
yasya vācyaṁ pravisthaṁ prasphurādi ādyamāna
sāmāyanāśa niratiśaya nijaṁ nityāyatnśatiyavastu
emba saurana sampradāya sampattu adantirali.
Innu kāpālika ondu lakṣyava kuruhiṭṭu alliye magnavāda.
“Piṇḍēbū anna pān'yahitaṁ
Tama arka sōmanātmā kaḷēvarēs'sadhyaṁ
dyatvācakrēṣaṭ diśāmagahitaṁ
ādyamāyātītaṁ nāthayē bhayaṅkaraṁ mahat”
emba kāpālikana sampradāya sampattu adantirali.
Innu vēdāntiyembātanu ondu lakṣyava kuruhiṭṭu
alliye magnavāda.
“Tāmasanātmō jaḍaḥ kr̥tidōṣētanmaya pāśōstha
vidaṁ nāśēti mārgē cidākāśē nibhāścaṁ sūkṣmakaḷābrahmaṁ”
emba vēdāntiya kartavya adantirali.
Innu ātmayōgiyembāta ondu lakṣyava kuruhiṭṭu
alliye magnavāda.
“Dēhasya dēhi dēhōhaṁ dēha mahātmō
caitan'ya svayannmēnā bindē kaḷāya karaṇaṁ prabhātēndriya
sākṣi jyōtiyasyan tarjyadaunāsti ātma”
emba ātmayōgiya mātadantirali.
Innu baud'dhanembāta ondu lakṣyava kuruhiṭṭu alliye magnavāda.
“Kuruṣya dēhō ahinsasya kāyōnātmaṁ
tannātma lakṣaṇē lakṣaṁ bhāgaṁ dēhasya
daumātratrayasmagmaṁ pūrṇaṁ drutyadr̥titanrdmabhāti”
emba bud'dhana vivēka adantirali.
Innu māyāvādi ondu lakṣyava kuruhiṭṭu alliye magnavāda.
Pan̄caupradānē bhōdēyētyastadēhi
mardhayasthaṁ sayēva brahma mādava rudrēśvarā”
śivasadā pan̄camuktanśivāya
viṣṇurūpāya śivarūpāya viṣṇuvē
śivasya hr̥dayaṁ viṣṇu viṣṇōśca hr̥dayaṁ śiva” endu
yētē brahma pan̄cakaṁ syāt
sayēkaṁ viśvamaya śaktiyō viśvaṁ viśvātmanēkarudrōdvatīyaṁ”
emba māyāvādi arivu adantirali.
Innu mīmānsakanondu ondu lakṣyava kuruhiṭṭu alliye magnavāda.
“Nāstidēhi karaṇaṁ khaḥ madyanē npa
syātmanāyēkaṁ matkanṣarau sadātmanē nityaṁ māna”
emba mīmānsakana bagedantirali.
Innu śūn'yavādiya ondu lakṣyava kuruhiṭṭu alliye magnavāda.
“Dēhāyindriyakaraṇaṁ nāsti
yēvama nāsti svargaṁ nāsti
māyāmayaṁ jaḍaṁ prakr̥tiyityadyau narakaḥ
narakaḥ pāpaṁ nāsti yadō jīva prajña jñānavāsi
ākāśa vāyē yēkamāsārdaṁ dr̥śyaṁ midaṁ
kauḷikaṁ jaḍakarmadr̥taṁ nāstinamidaṁ śūn'yaṁ nityaṁ vastu”
emba śūn'yavādiya karma adantirali.
Intī ṣaḍ darśana ṣaṇmataṅgaḷa bageyalla.
Vīraśaiva sid'dhāntiya bage. Adentendoḍe:
“Ēkōsvā śakti bhinna bahu na syāt vivēyāśaktināsti
nāstidvayaṁ śūn'yagarbhīkr̥taṁ mātmavasu”
emba vīraśaiva sid'dhāntiya niścayavu.
Innu śaivanembuvanu pan̄camukha daśamukha sakalakartanembanu,
śaivagamē mukhapan̄ca daśaṁ hastammāyudhaṁ śatr̥rūpakaṁ
utpatti sthināśādi kartavyaṁ paramēsvaraḥ:
Embunāga, idu husi.
Innu vaiṣṇavembuvanu viyajñānavemba garuḍana gamanavāgi
samastaṇandasvaya nārāyaṁ viśvarūpanembunu. Vaiṣṇāgamē:
“Viyadviṣṇupadaṁ vāpi sarvānandasayāśrayaṁ
viśvarūpasya puruṣaṁ nārāyaṇaiva vastuvat”
Embanāgi, idu husi.
Innu sāṅkhya darvatantranāgihanu.
Ā karmatantrakke sākṣayāda mantrasvarūpāda paśupatiyembanu.
Śākta gamē:
“Karmatamatarsya rūpakhya tatrē kartu samāhitaṁ
sākṣirūpatmanaivastu idaṁ vastu suniścayaṁ
embanāgi, idu husi.
Innu gāṇaparyanembuvanu ātmanu jaḍanāgihanu.
Ā jaḍavaḷiyalu ātmane vastu sarvadōṣarahitanembanu
gāṇapatyāmē:
“Karmādijaḍadōṣānāṁ jīvaṁ pāśādi lakṣaṇaḥ
tat pānāśa nirvāṇaṁ dōṣaṁ pāśādi vastuvat”
embanāgi, idu husi.
Innu sauranembavanu rūpavalla nirūpa niravayanu. Saurāgamē:
“Rūpaṁ nāsti nirūpaḥ syāt sarvāṅkāraṁ ca nāstivat”
nānāśaryamidaṁ nāsti syāt kartāraṁ parabrahmavat
embanāgi, idu husi.
Innu kāpālikanembātanu āru cakradoḷage
tōruva chāye vastuvembanu. Bhairavāgamē:
“Ṣaḍucakra bhavēdyastu svarūpaṁ chāyamātmānā’
īvyaśaibhairavannastu vastumēva na sanśayaḥ”
embanāgi, idu husi.
Innu vēdāntiyembavanu
cinmātranu citsvarūpanu tāneyembanu.
Yōgaśāstrē:
“Ajaḍāya anantāya asvapnāya mahāmataiḥ
yadrūpan̄cinidrāya tadrūpaṁ paramātmanā”
embanāgi, idu husi.
Innu ātmayōgiyembātanu
dēha nānalla. Dēhi nānalla. Sākṣājyōtiye ātmavastuyembanu.
Jñānakāṇḍē:
“Jaḍōyasya śarīrāṇāṁ jaḍājaḍasyayātmanaḥ
ajaḍaḥ paramēśānāṁ strāyantātma prakīrtītaḥ”
embanāgi, idu husi.
Innu baud'dhanembātanu dēha nānalla dēhiyalla.
Ātmanalla vastuvalla illadudeyillavembanu.
“Dēhadēvaṁ ca ātmasya vastumaṁ sarvanāstivat
embanāgi, idu husi.
Tatvayō husi. Nāsti tannāsti sarvanāsti mahaṁ mahat”
embanāgi, idu husi.
Innu māyāvādiyembātananu pan̄cabrahmaviśvamaya viśvanu
śivaviṣṇuśaktyātmakaṁ sarvahr̥dayanembanu. Brahmāṇḍa purāṇē”
“pan̄cabrahmamayaṁ viśva pan̄carūhō sadāśivaḥ”
śivaviṣṇōśca sambandhaṁ yēkamēvātma madavayaṁ”
embanāgi, idu husi.
Innu mīmānsakanembanu
dēha husi indr