Index   ವಚನ - 334    Search  
 
ಸದ್ಗುರುವೇ ಶಿವಲಿಂಗವು, ಸದ್ಗುರುವೇ ಜಂಗಮಲಿಂಗವು, ಸದ್ಗುರುವೆ ಪ್ರಸಾದಲಿಂಗವು, ಸದ್ಗುರುವೆ ಸದ್ಭಕ್ತನು, ಎಂದೆಂಬ ಮಹಾಜ್ಞಾನಜ್ಯೋತಿಪ್ರಕಾಶವಾದ ಜ್ಯೋತಿರ್ಮಯಲಿಂಗವೇ ಗುರುವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.