ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ.
ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ,
ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ,
ಪರಬ್ರಹ್ಮವನರಿಯದೆ ನುಡಿವಿರಿ,
ಬ್ರಹ್ಮದೊಡಕು ಅರಿದು ಕಂಡಿರಣ್ಣಾ.
ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ
ದೇವಜಾತಿಗಳು ಋಷಿಜನಂಗಳು
ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು
ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು
ಸರ್ವಪುರಾಣಪ್ರಸಿದ್ಧ,
ಇನ್ನೂ ತಲೆಯ ಮೋಟು ಕಾಣಬರುತ್ತದೆ.
ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ.
ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು
ಸ್ಕಂದ ಪುರಾಣಪ್ರಸಿದ್ಧ.
ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ:
ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ,
`ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವʼ ಇತಿ.
ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು.
'ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ
ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ'
ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ.
'ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ
ಊರ್ಧ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು'
ಎಂದುದಾಗಿ ಲಿಂಗವೇ ಪರಬ್ರಹ್ಮ.
ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ
ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು.
ಲೈಂಗ್ಯ ಪುರಾಣದಲ್ಲಿ,
'ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ
ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯ'
ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ,
ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ.
ʼಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ
ಬ್ರಹ್ಮಣೋsಧಿಪತಿರ್ಬ್ರಹ್ಮಾ ಶಿವೋ ಮೇsಸ್ತು ಸದಾಶಿವೋಂʼ
ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ:
'ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ'
ಭಗವಾನ್ ಮಹೇಶ್ವರಸ್ಸಾಕ್ಷಾನ್ಮಹಾದೇವೋ ನ ಸಂಶಯಃ
'ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್'
ಬ್ರಹ್ಮೇತಿ ಯಂ ಯಜುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್'
ಕೂರ್ಮ ಈಶ್ವರಗೀತೆಯಲ್ಲಿ,
ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ'
ಅಹಮೇವ ಪರಬ್ರಹ್ಮ ಮತ್ತೋsನ್ಯಂ ಹಿ ನ ವಿದ್ಯತೇ'
ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ
ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು:
ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮಮೀಶ್ವರ'|
ಊರ್ಧ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ'
ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ'
ಹಿರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ
ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ'
ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ'
ತೈತ್ತಿರೀಯ ಶ್ರುತಿ,
`ಸದ್ವಿಪ್ರಾಹಿ..... ಎಂದುದಾಗಿ,
ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು,
ಬಹಳ ಬಹಳ ಬಾಹು, ಬಹಳ ಪಾದನು,
ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ.
`ಅಣೋರಣೀಯಾನ್ ಮಹತೋ ಮಹೀಯಾನ್'ಎಂದುದಾಗಿ,
ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ'
ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ' ಎಂದುದಾಗಿ,
ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ
ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ
ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ.
ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ
ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ
ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ.
ಕಲಿಯುಗದಲ್ಲಿ ದೃಷ್ಟ:
ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ
ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ
ಮಹದಾನಂದಮುಕ್ತಿಯನೈದಿದರಣ್ಣಾ.
Art
Manuscript
Music
Courtesy:
Transliteration
Sākāraviḍidu parabrahma, nirākāraviḍidu parabrahmavembiri.
Parabrahmava nuḍiviri, parabrahmavanaridihevembiri,
arihisihevembiri, āne parabrahmavembiri,
parabrahmavanariyade nuḍiviri,
brahmadoḍaku aridu kaṇḍiraṇṇā.
Ī brahmadoḍakinda munnom'me
dēvajātigaḷu r̥ṣijanaṅgaḷu
brahmananu, parabrahmava besagoḷalu
ahaṁ brahmavendu taleya hōgāḍikoṇḍudu
sarvapurāṇaprasid'dha,Innū taleya mōṭu kāṇabaruttade.
Brahmana śira parabrahmada kaiyallide.
Āne parabrahmavendu sanatkumāra oṭṭeyādudu
skanda purāṇaprasid'dha.
Avarantāgade, parabrahmada neleya kēḷiraṇṇā:
Liṅgavē parabrahmavendu atharvaṇa hēḷuttade,
`ēkō rudras'sa īśānaḥ sa bhagavān sa mahēśvarō mahādēvaʼ iti.
Ī prakāradale yajurvēda hēḷuttiddittu.
'R̥taṁ satyaṁ paraṁ brahma puruṣaṁ kr̥ṣṇa piṅgalaṁ
ūrdhvarētaṁ virūpākṣaṁ viśvarūpāya vai namaḥ'
ī prakāradalli śivasaṅkalpōpaniṣat hēḷuttide.'R̥taṁ satyaṁ paraṁ brahmapuruṣaṁ kr̥ṣṇa piṅgalaṁ
ūrdhvarētaṁ virūpākṣaṁ tanmē manaśśivasaṅkalpamastu'
endudāgi liṅgavē parabrahma.
Munnom'me haribrahmara sanvādadalli uriliṅga udbhavavādalli
haribrahmādigaḷu stōtrava māḍidaru.
Laiṅgya purāṇadalli,
'jvālāmālāvr̥tāṅgāya jvalanastambharūpiṇē
namaśśivāya śāntāya brahmaṇē liṅgamūrtaya'
idu munnom'me brahmakāraṇa liṅgavē parabrahma,
śivanē parabrahmavendu matte yajurvēda nuḍiyuttide.
ʼīśānas'sarvavidyānāmīśvaras'sarvabhūtānāṁ brahmādhipati
brahmaṇōsdhipatirbrahmā śivō mēsstu sadāśivōṁʼ
āditya purāṇadalū mahāpuruṣa āditya hēḷuttiddāne:
'Parabrahmā ca īśāna ēkō rudras'sa ēva ca'
bhagavān mahēśvaras'sākṣānmahādēvō na sanśayaḥ
'yasyāntasthāni bhūtāni yēnēdaṁ dhāryatē jagat'
brahmēti yaṁ yajurvēdāḥ sarvē taṁ śaraṇaṁ vrajēt'
kūrma īśvaragīteyalli,
āvyaktaṁ kāraṇaṁ prāhurānandaṁ jyōtirakṣaraṁ'
ahamēva parabrahma mattōsn'yaṁ hi na vidyatē'
ahaṁ tatparamaṁ brahma paramātmā sanātanaḥ
Mahāpuruṣa manu mānavapurāṇadallū hēḷidanu:
R̥taṁ satyaṁ parabrahmapuruṣaṁ sōmamīśvara'|
ūrdhvarētaṁ samutpattisthitisanhārakāraṇaṁ'
viśvarūpaṁ virūpākṣaṁ candramauḷiṁ ghr̥ṇānidhiṁ'
hiraṇyabāhumadvandvaṁ hiraṇyapatimīśvaraṁ
ambikāyāḥ patiṁ sākṣādumāyāḥ patimakriyaṁ'
paratatvaṁ samākhyātaṁ śivaṁ dhyāyanti santataṁ'
taittirīya śruti,
`Sadviprāhi..... Endudāgi,
bahaḷa bahaḷa cakṣu, bahaḷa bahaḷa mukhanu,
bahaḷa bahaḷa bāhu, bahaḷa pādanu,
intaha bahaḷa liṅgave, brahma kāṇiraṇṇā.
`Aṇōraṇīyān mahatō mahīyān'endudāgi,
bahaḷakke bahaḷa, mahābahaḷa liṅgave bahaḷabrahma kāṇiraṇṇā.
Yatō vācō nivartantē aprāpya manasā saha'
nādabindukaḷātītaṁ guruṇā liṅgamudbhavaṁ' endudāgi,
manōvākkāya nādabindukaḷege atītanāda
mahābahaḷa liṅgavanu śrīguru nirūpisi koṭṭanāgi
Ī liṅgavē parabrahma kāṇiraṇṇā.
Idu kāraṇa, parabrahmaliṅgavendu dhyānisi pūjisi
mahānanda paramuktiyanaididaru pūrvadalli
dēvajātigaḷu halabaru, idu purāṇa prasid'dha.
Kaliyugadalli dr̥ṣṭa:
Basavarājadēvaru modalāda asaṅkhyāta māhēśvararu idanaridu
uriliṅgapeddipriya viśvēśvaraliṅgave
parabrahmavendu aridu dhyānisi pūjisi
mahadānandamuktiyanaididaraṇṇā.