Index   ವಚನ - 343    Search  
 
ಸಾಲೋಕ್ಯವೆಂದೇನೋ, ಅಂಗದ ಮೇಲೆ ಲಿಂಗಸಂಬಂಧವಾಗಿರುತ್ತಿರಲು? ಸಾಮೀಪ್ಯವೆಂದೇನೋ, ಗುರುಲಿಂಗಜಂಗಮದಾಸೋಹ ಸನ್ನಿಧಿಯೊಳಿರುತ್ತಿರಲು? ಸಾರೂಪ್ಯವೆಂದೇನೋ, ಅನವರತ ಅರ್ಚನೆಯೊಳಿರುತ್ತಿರಲು? ಸಾಯುಜ್ಯವೆಂದೇನೋ, ಚತುರ್ದಶಭುವನವನೊಳಕೊಂಡ ಮಹಾಧನವ ಮನ ಅವಗವಿಸಿ ನೆನೆಯುತ್ತಿರಲು? ಇಂತೀ ಚತುರ್ವಿಧ ಪದವೆಂಬುದೇನೋ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮನರಿದ ಶರಣಂಗೆ?