Index   ವಚನ - 5    Search  
 
ಜಾಗ್ರದಲ್ಲಿ ನಿಮ್ಮ ದೇವರಿಗೆ ಸಲ್ಲದುದ ಮನ ನೆನೆಯದಿರಿ, ಕಂಗಳು ತುಂಬಿ ಅಹುದೆಂದು ಒಂದ ನೋಡಿದಿರಿ, ಅದು ಜಾಗ್ರದ ಬಯಕೆ, ಸ್ವಪ್ನದ ಕೂಡ, ನಿಜದ ಎಚ್ಚರಿಕೆ. ಭಕ್ತಿಗುಣವ ತಪ್ಪದಿರಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.