ಒಂದರಲ್ಲಿ ಎರಡದೆ, ಎರಡರಲ್ಲಿ ಮೂರದೆ,
ಮೂರರಲ್ಲಿ ನಾಲ್ಕದೆ, ನಾಲ್ಕರಲ್ಲಿ ಐದದೆ, ಐದರಲ್ಲಿ ಆರದೆ,
ಆರರೊಳಗಾದವರ ಭೇದವ ತಿಳಿದು,
ನೂರೊಂದರಲ್ಲಿ ಕಡೆಗಣಿಸಿ ಸಂದು,
ನಿಂದುನೋಡಿ ನಿಮ್ಮಂಗವ ಕಂಡುಕೊಳ್ಳಿ,
ಘನಲಿಂಗಸಂಗವ ಮಾಡಿಕೊಳ್ಳಿ,
ಸಂಗನ ಬಸವಣ್ಣನ ಬಟ್ಟೆಯ ಹೋಹಂದವ ತಿಳಿದುಕೊಳ್ಳಿ.
ಶಿವಲಿಂಗಾಂಗ ಶರಣರೆಲ್ಲರ ಸಾರುವ
ತೊಂಡ ಮುಕ್ತಿ ಭಕ್ತನ ಮಾಡು,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ
ಕುರುಂಗೇಶ್ವರಲಿಂಗವ ವೇಧಿಸಿ ಭೇದಿಸಿಕೊಳ್ಳಿ.
Art
Manuscript
Music
Courtesy:
Transliteration
Ondaralli eraḍade, eraḍaralli mūrade,
mūraralli nālkade, nālkaralli aidade, aidaralli ārade,
āraroḷagādavara bhēdava tiḷidu,
nūrondaralli kaḍegaṇisi sandu,
nindunōḍi nim'maṅgava kaṇḍukoḷḷi,
ghanaliṅgasaṅgava māḍikoḷḷi,
saṅgana basavaṇṇana baṭṭeya hōhandava tiḷidukoḷḷi.
Śivaliṅgāṅga śaraṇarellara sāruva
toṇḍa mukti bhaktana māḍu,
śud'dhasid'dhaprasid'dhaprasanna
kuruṅgēśvaraliṅgava vēdhisi bhēdisikoḷḷi