Index   ವಚನ - 11    Search  
 
ಇಷ್ಟ ಬಿದ್ದಲ್ಲಿ ಎತ್ತಿ ಕಟ್ಟಿಕೊಳಲಾಗದು. ವ್ರತ ಕೆಟ್ಟುದ ಕಂಡು, ಇನ್ನು ತಪ್ಪೆನೆಂದಡೆ ಒಪ್ಪಿ ಕೂಡಿಕೊಳ್ಳಬಾರದು. ಸತಿ ಕೆಟ್ಟು ನಡೆದುದ ಕಂಡು ಹಿಂದಕ್ಕೆ ಮರವೆ, ಮುಂದಕ್ಕೆ ಚಿತ್ತಶುದ್ಧವೆಂದಡೆ ಆ ಗುಣ ಶುನಕಸ್ವಪ್ನದಂತೆ. ಇಂತೀ ಇವ ಕಂಡು ಮತ್ತೆ ಹಿಂಗದಿದ್ದೆನಾದಡೆ ಇಹಪರಕ್ಕೆ ಹೊರಗು, ಏಲೇಶ್ವರಲಿಂಗಕ್ಕೆ ದೂರ.