ಜಲ ನೆಲ ಶಿಲೆ ತಾನಾಡುವ ಹೊಲ ಮುಂತಾಗಿ
ಸರ್ವವೆಲ್ಲವು ಲಿಂಗಾಯತಸಂಬಂಧವಾಗಿ,
ಭವಿಸಂಗ, ಭವಿನಿರೀಕ್ಷಣೆ, ಭವಿ ಅಪೇಕ್ಷೆ, ಭವಿದ್ರವ್ಯಂಗಳನೊಲ್ಲದೆ,
ಶಿವನನರಿವರಲ್ಲಿ, ಶಿವನ ಪೂಜೆಯ ಮಾಡುವರಲ್ಲಿ,
ಶಿವಮೂರ್ತಿಧ್ಯಾನದಿಂದ ಶಿವಲಿಂಗಾರ್ಚನೆಯ ಮಾಡುವರಲ್ಲಿ,
ಶಿವಪ್ರಸಾದವ ಕಾಡಿ ಬೇಡಿ ತಂದು ಒಡೆಯನಿಗಿತ್ತು
ಆ ಪ್ರಸಾದವ ಏಲೇಶ್ವರಲಿಂಗಕ್ಕೆ ಕೊಟ್ಟ
ಆ ವ್ರತಭಾವಿಗೆ ನಮೋ ನಮೋ ಎನುತಿದ್ದೆ.