Index   ವಚನ - 41    Search  
 
ನಾನು ಜಂಗಮ ನನಗೆ ಆಚಾರವೇಕೆಂದುದ ಮನ ಬಂದಂತೆ ನಡೆವ ಅಜ್ಞಾನಿ ಭಂಡರಿಗೆ ನಾನು ವಂದಿಸಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಹೊನ್ನು ಹೆಣ್ಣು ಮಣ್ಣು ಬಿಟ್ಟು ನಿರಾಬಾರಿಗಳಾಗಿ, ಶಿಖೆ ಜಡೆ ಬೋಳು ಮುಂತಾದ ರೂಪ ತಾಳಿ ಮರಳಿ ಹೊನ್ನಿಂಗೆರಗಿದಡೆ ಜಂಗಮದ್ರೋಹಿ, ಹೆಣೆಂಗೆರೆಗಿದರೆ ಗುರುದ್ರೋಹಿ, ಮಣ್ಣಿಂಗೆರಗಿದರೆ ಲಿಂಗದ್ರೋಹಿ, ಇಂತೀ ತ್ರಿವಿಧ ದ್ರೋಹಿಗಳ ಕಂಡು ವಂದಿಸಿದೆನಾದಢೆನಗದೆ ಭಂಗ ಅದೆಂತೆಂದೆಡೆ: “ಮುಂಡೇವ ಶಿವಚಿಹ್ನಾನಿಃ ಮುದ್ರಾಪಂಚಕ ಯಥಾ ನ ಚ ಪ್ರಯತ್ನೇ ತ್ರಮಲಂ ಕ್ರತ್ವಾ/ ಶಿವದ್ರೋಹಿ ನ ಸಂಶಯಃ ಇಂತಪ್ಪ ಭ್ರಷ್ಡರ ಏಲೇಶ್ವರಲಿಂಗವು ಬಲ್ಲನಾಗಿ ಒಲ್ಲನು.