Index   ವಚನ - 43    Search  
 
ಪರಪಾಕದ್ರವ್ಯವ ಬಿಟ್ಟಲ್ಲಿ ಬಹುಜಲ, ಹರಿವ ಜಲ ಮುಂತಾದ ಬಹು ನಿರೀಕ್ಷಣೆಯಾದ ಜಲಂಗಳ ಮುಟ್ಟಲಿಲ್ಲ. ಇಂತೀ ಪಾಕ ತಮ್ಮಾಯತ[ವೆ?], ಉದಕ ಅನ್ಯರಾಯತವೆ? ಮೊಲೆಯ ಮುಚ್ಚಿ ಸೀರೆಯ ತೆರೆದಲ್ಲಿ ಅಪಮಾನವೆಲ್ಲಿ ಅಡಗಿತ್ತು? ಇಂತೀ ವ್ರತದಂಗವ ನೀವೆ ಬಲ್ಲಿರಿ. ಇದು ಏಲೇಶ್ವರಲಿಂಗಕ್ಕೆ ಒಪ್ಪದ ಕ್ರೀ.