Index   ವಚನ - 45    Search  
 
ಬಾವಿ ಭಾಜನ ಚಿಲುಮೆ ಪರ್ಣ ಫಲ ಸರ್ವಸಯದಾನ ಸಂಗ್ರಹಗಳಲ್ಲಿ ಲಿಂಗಮುಖವಾಗಿ ತಂದ ಮತ್ತೆ, ಮನೆಯಲ್ಲಿ ಲಿಂಗಬಾಹ್ಯ ಕಂಡರೆಂದು ಅವರಿಗೆ ಲಿಂಗವ ಕಟ್ಟಬಹುದೆ? ಆ ಲಿಂಗದ್ರವ್ಯವ ಸೂಸಬಹುದೆ? ಲಿಂಗಾಂಗಿಗಳು ನೀವೆ ಉಭಯದ ಸಂದ ತಿಳಿದುಕೊಳ್ಳಿ. ಕಟ್ಟಿದ ಘಟ ತಪ್ಪದಂತೆ, ಲಿಂಗದ್ರವ್ಯ ಸೂಸದಂತೆ, ಸಂದೇಹದ ಸಂಬಂಧದಲ್ಲಿ ಸಾಯದಂತೆ, ಸುಸಂಗವ ತಿಳಿದುಕೊಳ್ಳಿ ಏಲೇಶ್ವರಲಿಂಗದಲ್ಲಿ ವ್ರತವನಂಗೀಕರಿಸಬಲ್ಲಡೆ.